Thursday, August 11, 2022

Latest Posts

ʼನಾನ್ ಸ್ಟಾಪ್ʼ ಹಾರಾಟ ನಡೆಸಿ ಭಾರತದ ನೆಲಕ್ಕೆ ಬಂದೇಬಿಟ್ಟಿತು ಮತ್ತೆ ಮೂರು ರಾಫೆಲ್

ಹೊಸದಿಲ್ಲಿ: ಫ್ರಾನ್ಸ್‌ ನಿಂದ ತಡೆರಹಿತವಾಗಿ ಹಾರಾಟ ನಡೆಸಿದ 3 ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸಿದೆ ಎಂದು ಭಾರತೀಯ ವಾಯುಪಡೆ ಖಚಿತಪಡಿಸಿದೆ. ರಫೇಲ್ ವಿಮಾನದ ಎರಡನೇ ತಂಡ ಇಂದು ಸಂಜೆ 8:14ಕ್ಕೆ ಭಾರತಕ್ಕೆ ಆಗಮಿಸಿವೆ.
ಫ್ರಾನ್ಸ್ ನ ಇಸ್ರೆಸ್ʼನಿಂದ ಹೊರಟ ರಫೇಲ್ ವಿಮಾನಗಳು ಇಂದು ಬೆಳಗ್ಗೆ ಗುಜರಾತ್ʼನ ಜಾಮ್ ನಗರ್ ತಲುಪಿವೆ. ನಾಳೆ ಹರಿಯಾಣದ ಅಂಬಾಲಾ ವಾಯುನೆಲೆಗೆ ಸೇರಿಕೊಳ್ಳಲಿವೆ. ತದನಂತರ ಅಧಿಕೃತವಾಗಿ ವಾಯುಸೇನೆಗೆ ಹಸ್ತಾಂತರ ಮಾಡುವ ಕಾರ್ಯ ನಡೆಯಲಿದೆ. ಯುದ್ಧ ವಿಮಾನಗಳು ಫ್ರೆಂಚ್ ವಾಯುಪಡೆಯ ಮಿಡ್ ಏರ್ ರೀಫ್ಯೂಲಿಂಗ್ ವಿಮಾನದೊಂದಿಗೆ ಆಗಮಿಸಿದ್ದವು.
ಇನ್ನು ಮೂರು ಓಮ್ನಿ-ರೋಲ್ ವಿಮಾನಗಳ ಆಗಮನದೊಂದಿಗೆ ಐಎಎಫ್ ಈಗ ಎಂಟು ರಫೇಲ್ ಜೆಟ್ʼಗಳನ್ನ ತನ್ನ ಸೇವೆಗೆ ನೀಡಲಿದೆ. ಐದು ರಫೇಲ್ʼಗಳ ಮೊದಲ ತಂಡ ಜುಲೈ 28ರಂದು ಭಾರತಕ್ಕೆ ಬಂದಿದ್ದು, ಸೆಪ್ಟೆಂಬರ್ 10ರಂದು ಅಧಿಕೃತವಾಗಿ ಹರಿಯಾಣದ ಅಂಬಾಲಾ ವಾಯುನೆಲೆಯಲ್ಲಿ ಸೇರ್ಪಡೆಗೊಂಡಿತ್ತು.
36 ಜೆಟ್ ಗಳನ್ನು 59 ಸಾವಿರ ರೂ.ವೆಚ್ಚದಲ್ಲಿ ಖರೀದಿಸಲು ಭಾರತ ಫ್ರಾನ್ಸ್ ಜತೆ ಒಪ್ಪಂದ ಮಾಡಿಕೊಂಡಿದೆ. 2023ರವೇಳಗೆ ಈ ಎಲ್ಲ ಯುದ್ಧ ವಿಮಾನಗಳು ಭಾರತದ ಬತ್ತಳಿಕೆ ಸೇರಿಕೊಳ್ಳಲಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss