Tuesday, July 5, 2022

Latest Posts

ಅಂಕೋಲಾ ಪುರಸಭೆ ಬಿಜೆಪಿ ತೆಕ್ಕೆಗೆ: ಅಧ್ಯಕ್ಷರಾಗಿ ಶಾಂತಲಾ, ಉಪಾಧ್ಯಕ್ಷೆ ರೇಖಾ ಆಯ್ಕೆ

ಅಂಕೋಲಾ: ಭಾರಿ ಕುತೂಹಲದ ಅಂಕೋಲಾ ಪುರಸಭೆಯಲ್ಲಿ ಬಿಜೆಪಿ ಗದ್ದುಗೆ ಏರಿದ್ದು ಅಧ್ಯಕ್ಷರಾಗಿ ಶಾಂತಲಾ ಅರುಣ ನಾಡಕರ್ಣಿ , ಉಪಾಧ್ಯಕ್ಷರಾಗಿ ರೇಖಾ ದಿನಕರ ಗಾಂವಕರ್ ಆಯ್ಕೆಯಾಗಿದ್ದಾರೆ.
ಭಾನುವಾರ ಪುರಸಭಾ ಸಭಾಭವನದಲ್ಲಿ ಚುನಾವಣೆ ನಡೆದಿದ್ದು, ಚುನಾವಣಾಕಾರಿಯಾಗಿ ತಹಶೀಲ್ದಾರ್ ಉದಯ ಕುಂಬಾರ, ಸಹ ಚುನಾವಣಾಕಾರಿಯಾಗಿ ಪುರಸಭಾ ಮುಖ್ಯಾಕಾರಿ ಬಿ. ಪ್ರಲ್ಹಾದ್ ಪಾಲ್ಗೊಂಡಿದ್ದರು.
ಬಿಜೆಪಿಗೆ ಹೆಚ್ಚು ಮತ  
ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಶಾಂತಲಾ ಅರುಣ ನಾಡಕರ್ಣಿ ಮತ್ತು ಕಾಂಗ್ರೆಸ್ಸಿನ ಮಂಜುನಾಥ ಸುಬ್ರಾಯ ನಾಯ್ಕ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ರೇಖಾ ಗಾಂವಕರ್ ಮತ್ತು ಕಾಂಗ್ರೆಸ್ಸಿನಿಂದ ಜೈನಾಬಿ ಬೇಂಗ್ರೆ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಬಿಜೆಪಿಯ 8 , ಪಕ್ಷೇತರ 5 ಮತ್ತು ಶಾಸಕರ ಒಂದು ಮತ ಸೇರಿ 14 ಮತ ಬಿದ್ದರೆ, ಕಾಂಗ್ರೆಸಿಗೆ ಪಕ್ಷದ 10 ಸದಸ್ಯರ ಮತ ಬಿದ್ದವು. ಹೀಗಾಗಿ ಬಿಜೆಪಿ ಅಕಾರ ಗದ್ದುಗೆ ಹಿಡಿಯಿತು.
ಮಾದರಿ ಪುರಸಭೆ 
ನಂತರ ನಡೆದ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ, ಅಭಿವೃದ್ದಿಯಲ್ಲಿ ಅಂಕೋಲಾ ಚಿತ್ರಣವನ್ನು ಬದಲಿಸಬೇಕಿದ್ದು, ಎಲ್ಲರೂ ಸೇರಿ ಪಕ್ಷಾತೀತ ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯದಿಂದ ಅನುದಾನ ತಂದು ಅಭಿವೃದ್ದಿ ಸಾಸಬೇಕಿದೆ. ಈಗಾಗಲೇ ಅಂಕೋಲಾಕ್ಕೆ ಒಳಚರಂಡಿಗೆ 50 ಕೋಟಿ ರೂ. ಮಂಜೂರಾಗಿದೆ. ಇದೇ ರೀತಿ ಇನ್ನೂ ವಿವಿಧ ಯೋಜನೆಗೆ ಅನುದಾನ ತಂದು ಮಾದರಿ ಪುರಸಭೆ ಮಾಡೋಣ ಎಂದರು.
ಸಹಕಾರಿ ಅಗತ್ಯವಿದೆ
ನೂತನ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ಮಾತನಾಡಿ, ತಮ್ಮನ್ನು ಅಧ್ಯಕ್ಷರನ್ನಾಗಿ ಮಾಡುವಲ್ಲಿ ಸಹಕರಿಸಿದ ಶಾಸಕಿ, ಎಲ್ಲ ಸದಸ್ಯರನ್ನು ಅಭಿನಂದಿಸಿ ಪಕ್ಷಾತೀತ ನೆಲೆಯಲ್ಲಿ ಸಹಕಾರ ನೀಡುವಂತೆ ಮನವಿ ಮಾಡಿದರು. ಉಪಾಧ್ಯಕ್ಷೆ ರೇಖಾ ಗಾಂವಕರ್ ಮಾತನಾಡಿದರು.
ನಂತರ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ನಗರದಲ್ಲಿ ವಿಜಯೋತ್ಸವ ಆಚರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss