Wednesday, July 6, 2022

Latest Posts

ಅಂಗಡಿ ಮಾಲೀಕನ ಗಮನ ಬೇರೆಡೆ ಸೆಳೆದು ೨ ಲಕ್ಷ ಕಳುವು ಮಾಡಿ ಪರಾರಿ

ಮೈಸೂರು: ಗ್ರಾಹಕರ ಸೋಗಿನಲ್ಲಿ ಟೈರ್ ಅಂಗಡಿಗೆ ಬಂದ ಕಳ್ಳರು, ಮಾಲೀಕನ ಗಮನವನ್ನು ಬೇರೆಡೆ ಸೆಳೆದು, ಗಲ್ಲಪೆಟ್ಟಿಗೆಯಲ್ಲಿದ್ದ ೨ ಲಕ್ಷರೂ ಹಣವನ್ನು ಎತ್ತಿಕೊಂಡು ಪರಾರಿಯಾದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.

ನಂಜನಗೂಡಿನ ಗುಂಡ್ಲುಪೇಟೆ ರಸ್ತೆ ಡಿ, ಎಸ್,ಪಿ. ಕಚೇರಿ ಎದುರು ಇರುವ ಎಮ್. ಆರ್. ಎಫ್. ಟೈರ್‌ಗೆ ಅಪರಿಚಿತ ಮಧ್ಯ ವಯಸ್ಸಿನ ಇಬ್ಬರು ಟೈರ್ ಕೊಳ್ಳಲು ಅಂಗಡಿಗೆ ಬಂದು, ಮಾಲೀಕ ಪಾಲಾಕ್ಷ ನ ಜೊತೆ ಚರ್ಚಿಸಿ, ೨ ಟೈರ್ ಗಳನ್ನು ಬೇಕು ಎಂದು ಕೇಳಿದರು. ನಂತರ ಮತ್ತೆ ೫ ಟೈರ್ ಕೇಳಿದ್ದಾರೆ.

ಆಗ ಮಾಲೀಕ ಅಂಗಡಿ ಹಿಂಭಾಗ ಗೋಡನ್ ನಲ್ಲಿ ಇದೆ ಎಂದು ತರುವುದಾಗಿ ಹೇಳಿ ಹೋದಾಗ ಈ ಸಂದರ್ಭವನ್ನು ಬಳಸಿಕೊಂಡ ಈ ವಂಚಕರು ಬ್ಯಾಂಕಿಗೆ ಕಟ್ಟಲು ಗಲ್ಲಪೆಟ್ಟಿಗೆಯಲ್ಲಿ ಇಟ್ಟಿದ್ದ ೨ ಲಕ್ಷ ನಗದನ್ನು ಲಪಟಾಯಿಸಿ, ಮಾಲೀಕನಿಗೆ ಚಳ್ಳೆ ಹಣ್ಣನ್ನು ತಿನ್ನಿಸಿ ಪರಾರಿಯಾಗಿದ್ದಾರೆ. ಈ ಬಗ್ಗೆ ಮಾಲೀಕ ಪಾಲಾಕ್ಷ ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಸ್ಥಳಕ್ಕೆ ವೃತ್ತ ನಿರೀಕ್ಷಕ ಲಕ್ಷಿ÷್ಮಕಾಂತ್ ಕೆ ತಳವಾರ್ ಭೇಟಿ ನೀಡಿ ಪರಿಶೀಲಿಸಿದರು. ಅಂಗಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸದೆ ಇರುವುದರಿಂದ ತಕ್ಷಣಕ್ಕೆ ಕಳ್ಳರನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ, ಆದರೂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss