Wednesday, August 10, 2022

Latest Posts

ಅಂಗನವಾಡಿಗಳಲ್ಲಿ ಆಹಾರದ ಜೊತೆ ಚಿಕ್ಕಿಗಳನ್ನು 1 ವರ್ಷಗಳ ಕಾಲ ನೀಡಲಾಗುತ್ತದೆ: ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್

ತುಮಕೂರು: ಪಾವಗಡ ತಾಲೂಕಿನ ಮಕ್ಕಳಲ್ಲಿ ಅಪೌಷ್ಠಿಕತೆ ದೂರ ಮಾಡಲು ತಾಲೂಕಿನ ಆಯ್ದ ಒಂದು ಸಾವಿರ ಮಕ್ಕಳಿಗೆ ಒಂದು ವರ್ಷಗಳ ಕಾಲ ಸ್ಪಿರುಲಿನಾ ಚಿಕ್ಕಿ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಡಾ.ರಾಕೇಶ್ ಕುಮಾರ್ ತಿಳಿಸಿದ್ದಾರೆ.

ಪಾವಗಡದಲ್ಲಿ ಮೈಸೂರಿನ ಸಿಎಫ್ ಟಿಆರ್ ಐ ಸಂಸ್ಥೆ ಜಿಲ್ಲಾಪಂಚಾಯತ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ಪಿರುಲಿನಾ ಚಿಕ್ಕಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಪಾವಗಡ ತಾಲೂಕಿನ ಮಕ್ಕಳಲ್ಲಿ ಹಲವಾರು ಕಾರಣಗಳಿಂದ ಅಪೌಷ್ಠಿಕತೇ ಹೆಚ್ಚಾಗಿದ್ದು ಅವರು ಮನೆಯಲ್ಲಿ ಸೇವಿಸುವಂತೆ ಆಹಾರ ಮತ್ತು ಅಂಗನವಾಡಿಗಳಲ್ಲಿ ನೀಡುವ ಆಹಾರದ ಜೊತೆ ಈ ಚಿಕ್ಕಿಗಳನ್ನು ಒಂದು ವರ್ಷಗಳ ಕಾಲ ನೀಡಲಾಗುತ್ತದೆ ಎಂದರು.

ಒಂದು ವರ್ಷಗಳ ಕಾಲ ತಾಲೂಕಿನ 1000ಮಕ್ಕಳಿಗೆ ಈ ಚಿಕ್ಕಿ ಗಳನ್ನು ನೀಡಿ ಅವರ ಆರೋಗ್ಯ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ತಾಲೂಕಿನ ಎಲ್ಲಾ ಮಕ್ಕಳಿಗೆ ಹಾಗೂ ಜಿಲ್ಲೆಯಲ್ಲಿನ ಎಲ್ಲಾ ಮಕ್ಕಳಿಗೂ ಈ ಚಿಕ್ಕಿಗಳನ್ನು ನೀಡಲಾಗುತ್ತದೆ ಎಂದರು.
ಮ ಕ್ಕಳಲ್ಲಿನ ಮಾನಸಿಕ, ಭೌದ್ಧಿಕ ಹಾಗೂ ದೈಹಿಕ ಬೆಳವಣಿಗೆಗೆ ಈ ಚಿಕ್ಕಿ ಸಹಕಾರಿ ಎಂದರು.

ಚಿಕ್ಕಿಯಲ್ಲಿನ ಸೂಕ್ಷ್ಮ ಪೋಷಕಾಂಶಗಳು ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ,ಅದರಲ್ಲೂ ಕರೊನ ಸೋಂಕಿನ ಈ ಸಂದರ್ಭದಲ್ಲಿ ಮಕ್ಕಳಿಗೆ ಬಹು ಉಪಯೋಗಿ ಎಂದರು. ಪಾವಗಡ ಶಾಸಕ ವೆಂಕಟರಮಣಪ್ಪ,ಸ್ಪಿರುಲಿನಾ ಫೌಂಡೇಶನ್ ಅಧ್ಯಕ್ಷರಾದ ಆರ್. ವಿ.ಮಹೇಶ್ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss