Saturday, July 2, 2022

Latest Posts

ಅಂಗಾಂಗ ದಾನದಿಂದ ನಾಲ್ವರ ಬಾಳಲ್ಲಿ ಬೆಳಕು

ಮೈಸೂರು: ಅಪಘಾತದಿಂದ ಮಿದುಳು ನಿಷ್ಕ್ರಿಯಗೊಂಡಿದ್ದ ಯುವಕನೊಬ್ಬನ ಅಂಗಾಗಗಳನ್ನು ಆತನ ಪೋಷಕರು ದಾನ ಮಾಡುವ ಮೂಲಕ ನಾಲ್ವರ ಬಾಳಿಗೆ ಬೆಳಕಾಗಿದ್ದಾರೆ. ಆ ಮೂಲಕ ಆ ಯುವಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ.

ಮದನ್ ರಾಜ್(22) ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಯುವಕ ಮದನ್ ರಾಜ್ ಎಂಬುವರು ಕೊಪ್ಪ ಆವರ್ತಿ ಬಳಿ ರಸ್ತೆ ಅಪಘಾತದಲ್ಲಿ ಫೆ.9ರಂದು ಗಂಭೀರವಾಗಿ ಗಾಯಗೊಂಡಿದ್ದರು.

ಅವರನ್ನು ಅಪೋಲೋ ಬಿಜಿಎಸ್ ಆಸ್ಪತ್ರೆ ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ನೀಡಿ 24 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಆದರೆ ಫೆ.ನಿನ್ನೆ ಮಿದುಳು ನಿಷ್ಕ್ರಿಯಗೊಂಡಿರುವುದನ್ನು ಪೋಷಕರಿಗೆ ತಿಳಿಸಲಾಯಿತು.

ಅಲ್ಲದೆ ಮದನ್ ರಾಜ್ ರ ಅಂಗಾಂಗಗಳನ್ನು ದಾನ ಮಾಡಿದರೆ, ನಾಲ್ವರ ಜೀವ ಉಳಿಸಬಹುದೆಂದು ಆಸ್ಪತ್ರೆಯವರು ಮನವರಿಕೆ ಮಾಡಿಕೊಟ್ಟರು. ಇದಕ್ಕೆ ಪೋಷಕರು ಒಪ್ಪಿಗೆ ಸೂಚಿಸಿದರು.

ಯಶಸ್ವಿ ಶಸ್ತ್ರಚಿಕಿತ್ಸೆ: ಹಿಗ್ಗಿದ ಕಾರ್ಡಿಯೋಮಿ ಯೋಪತಿ ಎಂಬ ರೋಗದಿಂದ ಬಳಲುತ್ತಿದ್ದ ವ್ಯಕ್ತಿಗೆ ಮದನ್ ರಾಜ್ ಅವರ ಹೃದಯ ಕಸಿ ಮಾಡಲಾಗಿದೆ. 2 ವರ್ಷಗಳಿಂದ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಾಣದೇ ನಾರಾಯಣ ಹೆಲ್ತ್ ಸಿಟಿಗೆ  ಕರೆದೊಯ್ಯಲಾಯಿತು. ಹೃದ್ರೋಗ ಮತ್ತು ಹೃದಯ ವೈಫಲ್ಯ ನಿರ್ವಹಣೆಯ ಹಿರಿಯ ಸಲಹೆಗಾರ ಡಾ. ಭಗೀರಥ್ ರಘುರಾಮನ್ ಅವರ ನೇತೃತ್ವದ ಹೃದ್ರೋಗ ತಂಡ ರೋಗಿಗೆ ವಿವರವಾದ ಪರೀಕ್ಷೆಯನ್ನು ಮಾಡಿ, ಹೃದಯ ಕಸಿಯೊಂದೇ ಅವರ ಸ್ಥಿತಿಗೆ ಅತ್ಯಂತ ಪರಿಣಾಮಕಾರಿ ಚಿಕಿತ್ಸೆ ಎಂದರು. ರೋಗಿಯನ್ನು ಜೀವಸರ್ಥಕತೆಯಲ್ಲಿ ನೋಂದಾಯಿಸಲು ಸೂಚಿಸಲಾಯಿತು.

ಅವರು 3 ತಿಂಗಳ ಹಿಂದೆ ಜೀವಸರ್ಥಕಥೆಯಲ್ಲಿ ನೋಂದಣಿ ಮಾಡಿಕೊಂಡಿದ್ದರು. ಅದೃಷ್ಟವಶಾತ್ ಅವರಿಗೆ ಇಂದು ಹೊಂದಾಣಿಕೆಯಾಗುವ ಹೃದಯವು ದೊರೆತಿದ್ದು, ಕಸಿ ಶಸ್ತ್ರ ಚಿಕಿತ್ಸೆ ಒಳಗಾದರು. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು ರೋಗಿಯು ಚೇತರಿಸಿಕೊಳ್ಳುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss