Wednesday, August 17, 2022

Latest Posts

ಅಂಚೆ ಇಲಾಖೆಯಿಂದ ಹಿರಿಯ ನಾಗರಿಕರಿಗೆ ‘ಡಿಜಿಟಲ್’ ಸೇವೆ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಂಚೆ ಇಲಾಖೆಯಿಂದ ಹಿರಿಯ ನಾಗರಿಕರಿಗೆ ಡಿಜಿಟಲ್ ಜೀವನ ಪ್ರಮಾಣ ಪತ್ರ ಸೇವೆ ಒದಗಿಸಲು ಮುಂದಾಗಿದೆ.

ಕೊರೋನಾ ವೈರಸ್ ಹೆಚ್ಚಾಗಿರುವ ಹಿನ್ನಲೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಜೊತೆಗೂಡಿ ಅಂಚೆ ಇಲಾಖೆ ಈ ನೂತನ ಡಿಜಿಟಲ್ ಸೇವೆ ನೀಡಲಿದೆ. ಇದರಿಣದ ಹಿರಿಯ ನಾಗರೀಕರು ಪಿಂಚಣಿ ಬಿಡುಗಡೆ ಮಾಡುವ ಸಂಸ್ಥೆಗಳಿಗೆ ತೆರಳದೆಯೇ ಜೀವಂತ ಪ್ರಮಾಣ ಪತ್ರ ಸಲ್ಲಿಸಬಹುದು.

ಈ ಸೇವೆಗೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಪಿಎಸ್ ಯು, ಪಿ ಎಸ್ ಬಿ ಹಾಗೂ ಇತರೆ ಸರ್ಕಾರಿ ನೌಕರರಿಗೆ ಈ ಸೇವೆ ನೀಡಲಾಗುತ್ತದೆ. ಪಿಂಚಣಿದಾರರು ತಮ್ಮ ಆಧಾರ್, ಮೊಬೈಲ್ ನಂಬರ್, ಪಿಂಚಣಿ ವಿವರಗಳನ್ನು ನೀಡಬೇಕು. ಹಾಗೂ 70 ರೂ. ಶುಲ್ಕ ವಿಧಿಸಲಾಗುತ್ತದೆ.

ಈ ಸೌಲಭ್ಯವನ್ನು ಸ್ಥಳೀಯ ಅಂಚೆಕಚೇರಿ, ಅಂಚೆ ಕಚೇರಿಯಿಂದ ಲಭ್ಯವಿರುವ ಪೋಸ್ಟ್ ಮೆನ್/ ಗ್ರಾಮೀಣ ಅಂಚೆ ಸೇವಕರ (ಗ್ರಾಮೀಣ್‌ ಡಾಕ್‌ ಸೇವಕ್) ಗಳಿಂದ ಜೀವಂತ ಪ್ರಮಾಣಪತ್ರವನ್ನು ಪಡೆದುಕೊಳ್ಳಬಹುದಾಗಿದೆ.

http://ccc.cept.gov.in/covid/request.aspx ಲಿಂಕ್ ಮೂಲಕ ‘ಸೆಲೆಕ್ಟ್ ಸರ್ವೀಸ್’ ಟ್ಯಾಬ್ನಲ್ಲಿ ‘IPPB’ ಆಯ್ಕೆ ಮಾಡಿ. ಅದರಲ್ಲಿ ‘IPPB Service type’ನಲ್ಲಿ ಜೀವನ ಪ್ರಮಾಣ ಆಯ್ಕೆ ಮಾಡಿ ಮತ್ತು ಸಲ್ಲಿಸಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!