ಹೊಸ ದಿಗಂತ ವರದಿ, ಕೊಪ್ಪಳ:
ಐತಿಹಾಸಿಕ ಪ್ರಸಿದ್ದ ಅಂಜನಾದ್ರಿ ಬೆಟ್ಟಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಸಹಸ್ರಾರು ಹನುಮ ಮಾಲಾಧಾರಿಗಳು ಆಗಮಿಸಿ ದರುಶನ ಪಡೆದು ಕೃಪೆಗೆ ಪಾತ್ರರಾದರು.
ಪ್ರತಿ ವರ್ಷವು ರಾಜ್ಯದಿಂದ ಡಿಸೆಂಬರ್ ತಿಂಗಳು 14 ದಿನಗಳ ವ್ರತಾಚರಣೆ ನಡೆಸಿ ಭಾನುವಾರ ಮಾಲಾ ವಿಸರ್ಜನೆ ಮಾಡಿ, ಅಂಜನಾದ್ರಿ ಬೆಟ್ಟದ ಹನುಮಂತ ದರುಶನ ಪಡೆಯುವುದು ವಾಡಿಕೆಯಾಗಿದೆ.
ಕೊರೋನಾ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮಾಲಾವಿಸರ್ಜನೆಯನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಆದರೂ ಭಕ್ತರು ದೇವಸ್ಥಾನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಆಮಮಿಸಿ ಸ್ವಯಂ ಮಾಲಾ ವಿಸರ್ಜನೆ ಮಾಡಿ ಸ್ವಸ್ಥಳಕ್ಕೆ ತೆರಳಿದರು.
ವಿಶೇಷ ಅಲಂಕಾರ
ಹನುಮದ್ ವೃತ ನಿಮಿತ್ತ ಅಂಜನಾದ್ರಿ ಶ್ರೀ ಆಂಜನೇಯ ಸ್ವಾಮಿ ದೇಗುಲಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದೆ. ಬೆಳಗ್ಗೆ ಅಭಿಷೇಕ ಪೂಜೆ ಧಾರ್ಮಿಕ ಕಾರ್ಯಕ್ರಮಗಳು ನಡೆಸಲಾಗಿದೆ.
ಇದೇ ವೇಳೆ ವಿಶ್ವ ಹಿಂದು ಪರಿಷತ್ ರಾಜ್ಯ ಸಂಚಾಲಕ ಸೂರ್ಯನಾರಾಯಣ, ಪ್ರಾಂತ ಸಂಚಾಲಕ ಪುಂಡಲಿಕ, ಕೊಪ್ಪಳ ಜಿಲ್ಲಾ ಸಂಚಾಲಕ ವಿನಯ ಪಾಟೀಲ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.