Saturday, August 13, 2022

Latest Posts

ಅಂಜೂರ ಆರೋಗ್ಯವನ್ನಷ್ಟೇ ಅಲ್ಲ ಸೌಂದರ್ಯವನ್ನೂ ವೃದ್ಧಿಸುತ್ತದೆ…ಅದು ಹೇಗೆ ಅಂತೀರಾ? ಇಲ್ಲಿದೆ ಓದಿ..

ಅಂಜೂರವನ್ನು ಒಣಗಿಸಿಟ್ಟುಕೊಂಡು ಕೂಡ ಬಳಸುತ್ತಾರೆ. ವರ್ಷದವರೆಗೂ ಇದನ್ನು ಒಳಸಬಹುದು. ಅಂಜೂರದಲ್ಲಿರುವ ಪ್ರೊಟೀನ್, ಅಧಿಕ ಪ್ರಮಾಣದ ಪೋಷಕಾಂಶ, ಖನಿಜಗಳಿರುವುದರಿಂದ ಇದರ ಸೇವನೆ ನಿಮ್ಮನ್ನು ಆರೋಗ್ಯವಾಗಿ ಇಡುತ್ತದೆ. ಅಂಜೂರ ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಒಳ್ಳೆಯದು. ಅಂಜೂರ ಹೆಚ್ಚು ಸೇವಿಸಿದರೆ ಹೇಗೇ ಸೌಂದರ್ಯ ವೃದ್ಧಿಯಾಗುತ್ತದೆ ಎಂಬುದು ಇಲ್ಲಿದೆ ನೋಡಿ.

  • ಕೂದಲು ಉದುರುವ ಸಮಸ್ಯೆ ಇರುವವರು ಹಸಿ ಅಂಜೂರವನ್ನು ಹಾಲಿನಲ್ಲಿ ರುಬ್ಬಿಕೊಂಡು ಅದನ್ನು ವಾರದಲ್ಲಿ ಒಂದು ದಿನ ಕೂದಲಿಗೆ ಹಚ್ಚಿಕೊಳ್ಳಬೇಕು. ಇದರಿಂದ ಕೂದಲು ಉದುರುವುದಿಲ್ಲ, ಹೊಟ್ಟು ನಿಯಂತ್ರಣದಲ್ಲಿ ಇರುತ್ತದೆ.
  • ಸುಟ್ಟ ಕಲೆ ನಿವಾರಣೆಗೆ ಅಂಜೂರವನ್ನು ಪೇಸ್ಟ್ ಮಾಡಿಕೊಂಡು ಹಚ್ಚಿಕೊಳ್ಳಿ. ಇದರಿಂದ ಸುಟ್ಟ ಕಲೆ ನಿವಾರಣೆಯಾಗುತ್ತದೆ.
  • ವಯಸ್ಸಾದಂತೆ ಮುಖದ ಮೇಲೆ ನೆರಿಗೆಗಳು, ಕಲೆಗಳು ಆಗಲು ಪ್ರಾರಂಭವಾಗುತ್ತದೆ.  ಹೆಚ್ಚು ಹೆಚ್ಚು ಅಂಜೂರವನ್ನು ಸೇವಿಸಿದರೆ ಈ ಸಮಸ್ಯೆಗಳು ಇರುವುದಿಲ್ಲ. ಏಕೆಂದರೆ ಅಂಜೂರದಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಕಾಲಜನ್ ವಿರೋಧಿ ಗುಣಗಳಿವೆ. ಇವು ನೆರಿಗೆ ಕಾಣದಂತೆ ಮಾಡುತ್ತವೆ.
  • ಡಾರ್ಕ್ ಸರ್ಕಲ್ ಹೆಚ್ಚು ಇರುವವರು ಅಂಜೂರದ ರಸಕ್ಕೆ ವಿಟಮಿನ್ ಇ ಜೆಲ್ ಸೇರಿಸಿಕೊಂಡು ದಿನಕ್ಕೆ 1 ತಾಸು ಇದನ್ನು ಕಣ್ಣಿನ ಕೆಳಗೆ ಹಚ್ಚಿಕೊಳ್ಳಬೇಕು. ಇದನ್ನು ಒಂದು ವಾರ ಹಚ್ಚಿದರೂ ಸಾಕು ಡಾರ್ಕ್ ಸರ್ಕಲ್ ಹೋಗುತ್ತದೆ.
  •  ಅಂಜೂರವನ್ನು ಒಂದು ಗಂಟೆ ನೀರಿನಲ್ಲಿ ನೆನೆಸಿಟ್ಟು ಅದನ್ನು ಪೇಸ್ಟ್ ಮಾಡಿಕೊಳ್ಳಿ. ಅದಕ್ಕೆ ಬಾದಾಮಿ ಎಣ್ಣೆ 3 ಚಮಚ ಮಿಕ್ಸ್ ಮಾಡಿಕೊಳ್ಳಿ.  ಇದನ್ನು ಮುಖಕ್ಕೆ ಹಚ್ಚಿದರೆ ಮುಖದ ಕಾಂತಿ ಹೆಚ್ಚುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss