Monday, August 8, 2022

Latest Posts

ಅಂತರ್ಜಾತಿ ವಿವಾಹವಾದ ಮಗಳು: ಸಂಪ್‌ಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಪೋಷಕರು

ಬೆಂಗಳೂರು: ಮಗಳು ಅಂತರ್ಜಾತಿ ವಿವಾಹವಾದಳೆಂದು ಪೋಷಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉತ್ತರ ತಾಲೂಕಿನ ಹಾರೋಕೇತನಹಳ್ಳಿಯಲ್ಲಿ ಸಂಪ್‌ಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಿವಲಿಂಗಪ್ಪ ಮತ್ತು ಚಂದ್ರಕಲಾ ಆತ್ಮಹತ್ಯೆ ಮಾಡಿಕೊಂಡ ಪೋಷಕರು. ಇವರ ಪುತ್ರಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು,ಯುವಕನೊಬ್ಬನನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದಾಳೆ.ಇದಕ್ಕೆ ಒಪ್ಪದ ಪೋಷಕರು ಬುದ್ಧಿವಾದ ಹೇಳಿದ್ದಾರೆ. ಐದು ತಿಂಗಳು ಈಕೆಯನ್ನು ಕೆಲಸಕ್ಕೆ ಕಳಿಸದೇ ಮನೆಯಲ್ಲಿಯೇ ಬುದ್ಧಿ ಹೇಳಿದ್ದಾರೆ. ನಂತರ ಕೆಲಸಕ್ಕೆ ಹೋಗಿಬರುತ್ತೇನೆ ಎಂದು ಹೇಳಿ ಹೋದ ಮಗಳು ಮದುವೆಯಾಗಿದ್ದಾಳೆ. ಇದರಿಂದ ಮನನೊಂದು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss