Thursday, August 11, 2022

Latest Posts

ಅಂತರ್ ಜಿಲ್ಲಾ ದ್ವಿಚಕ್ರ ಕಳ್ಳರ ಬಂಧನ: 7.25 ಲಕ್ಷ ರೂ. ಮೌಲ್ಯದ 26 ಬೈಕ್ ಗಳ ವಶ

ಹೊಸ ದಿಗಂತ ವರದಿ, ಮಂಡ್ಯ:

ಅಂತರ್ ಜಿಲ್ಲಾ ದ್ವಿಚಕ್ರ ಕಳ್ಳರನ್ನು ಬಂಧಿಸಿರುವ ಪೊಲೀಸರು ಅವರಿಂದ 7.25 ಲಕ್ಷ ರೂ. ಮೌಲ್ಯದ 26 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮಳವಳ್ಳಿ ತಾಲೂಕಿನ ಹಿಟ್ಟನಕೊಪ್ಪಲು ಗ್ರಾಮದ ಶರತ್(20), ಮಂಡ್ಯ ನಗರದ ಬೀಡಿಕಾರ್ಮಿಕರ ಕಾಲೋನಿಯ ನಿವಾಸಿ ಸಫೀವುಲ್ಲಾ ಆಲಿಯಾಸ್ ಬಾಬು(32) ಹಾಗೂ ಹೊಳಲು ಗ್ರಾಮದ ಸಂತೋಷ್ ಆಲಿಯಾಸ್ ಸಂತು(30) ಬಂಧಿತ ಆರೋಪಿಗಳು.
ಮೂವರು ಆರೋಪಿಗಳು ಹೀರೋ ಸ್ಪ್ಲೆಂಡರ್ ಬೈಕ್‌ನಲ್ಲಿ ಜ.11ರಂದು ಮುಂಜಾನೆ 5 ಗಂಟೆ ಸಮಯದಲ್ಲಿ ನಗರದ ಸ್ವರ್ಣಸಂದ್ರದ ಸುರೇಶ್ ಪೆಟ್ರೋಲ್ ಬಂಕ್ ಬಳಿ ಬೆಂಗಳೂರು ಕಡೆಗೆ ಹೋಗುವ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಗಸ್ತಿನಲ್ಲಿದ್ದ ಸಿಬ್ಬಂದಿಗಳಾದ ಲೋಕೇಶ್, ಗಿರಿಶ್ ಹಾಗೂ ಆನಂದ ಅವರು ಮೂವರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ದ್ವಿಚಕ್ರ ವಾಹನಗಳ ಕಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅಪರ ಪೊಲೀಸ್ ವರಿಷ್ಠಾಕಾರಿ ಧನಂಜಯ ತಿಳಿಸಿದರು.
ನಗರ ಸೇರಿದಂತೆ ವಿವಿಧೆಡೆ ಒಂಟಿಯಾಗಿ ನಿಂತಿದ್ದ ದ್ವಿಚಕ್ರ ವಾಹನಗಳನ್ನು ಟಾರ್ಗೆಟ್ ಮಾಡಿಕೊಂಡು ನಕಲಿ ಕೀ ಬಳಸಿ ಹಾಗೂ ಹ್ಯಾಂಡ್ ಬ್ರೇಕ್ ಮಾಡಿ ಕಳ್ಳತನ ಮಾಡುತ್ತಿದ್ದರು. ಬಂತರಿಂದ 7.25 ಲಕ್ಷ ರೂ. ಮೌಲ್ಯದ 26 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದರು.
ಆರೋಪಿಗಳ ವಿರುದ್ಧ ಕಿರುಗಾವಲು, ಬನ್ನೂರು ಹಾಗೂ ಟಿ.ನರಸೀಪುರ ಠಾಣೆಗಳಲ್ಲಿ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.
ಡಿವೈಎಸ್ಪಿ ನವೀನ್‌ಕುಮಾರ್, ಸಿಪಿಐ ಸಂತೋಷ್, ಪಿಎಸ್‌ಐ ಶರತ್‌ಕುಮಾರ್, ಎಎಸ್‌ಐ ಲಿಂಗರಾಜು, ಸಿಬ್ಬಂದಿಗಳಾದ ಉಮರ್ ಅಹಮದ್, ಕಬಡ್ಡಿ ಮಂಜುನಾಥ, ಮಹೇಶ್, ಶ್ರೀನಿವಾಸ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಕೆ.ಪರಶುರಾಮ ಪ್ರಶಂಶಿಸಿ ನಗದು ಬಹುಮಾನ ಘೋಷಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೂರ್ವ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss