ತಿರುವನಂತಪುರಂ:ಕೊರೋನಾ ವೈರಾಣು ಪಿಡುಗಿನ ಹಿನ್ನೆಲೆಯಲ್ಲಿ ಈಗಾಗಲೇ ಕರ್ನಾಟಕದೊಂದಿಗೆ ಇರುವ ಗಡಿಗಳು ಬಂದಾಗಿರುವ ಹೊರತಾಗಿ ಇದೀಗ ತಮಿಳ್ನಾಡು ಜೊತೆಗಿನ ಗಡಿಗಳನ್ನೂ ಬಂದ್ ಮಾಡುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪೊಲೀಸರಿಗೆ ಆದೇಶ ನೀಡಿರುವುದಾಗಿ ತಿಳಿದುಬಂದಿದೆ.
ಜಿಲ್ಲಾ ಕಲೆಕ್ಟರ್ಗಳು ಮತ್ತು ಪೊಲೀಸ್ ಮುಖ್ಯಸ್ಥರ ಜೊತೆ ನಡೆಸಿದ ವೀಡಿಯೋ ಲಿಂಕ್ ಮೂಲಕ ನಡೆಸಿದ ಸಭೆಯಲ್ಲಿ ಪಿಣರಾಯಿ ವಿಜಯನ್ ಅವರು, ಕೇರಳದೊಂದಿಗೆ ಗಡಿಗಳನ್ನು ಹೊಂದಿರುವ ನೆರೆಯ ರಾಜ್ಯಗಳಿಂದ ಜನರ ಸಂಚಾರವನ್ನು ನಿರ್ಬಂಸಬೇಕೆಂದು ನಿರ್ದೇಶನ ನೀಡಿದ್ದಾರೆ.ವಿಶೇಷವಾಗಿ ಈಗ ಕೋವಿಡ್-೧೯ಪ್ರಕರಣಗಳು ಒಮ್ಮೆಲೇ ಹೆಚ್ಚಾಗುತ್ತಿರುವ ಇಡುಕ್ಕಿ ಜಿಲ್ಲೆಯನ್ನು ಗಮನದಲ್ಲಿಟ್ಟುಕೊಂಡು ಅವರು ಈ ನಿರ್ದೇಶನ ನೀಡಿರುವುದಾಗಿ ಹೇಳಲಾಗಿದೆ.
ಕೊಯಮತ್ತೂರು ಮತ್ತು ತಿರುಪುರ್ಗಳ ಜೊತೆ ಕೇರಳ ಗಡಿಯನ್ನು ಹೊಂದಿದೆ.ಕೇರಳವು ಇಡುಕ್ಕಿ ಮತ್ತು ಕೊಟ್ಟಾಯಂಗಳಲ್ಲಿ ಲಾಕ್ಡೌನ್ ನಿಯಮಗಳನ್ನು ಸಡಿಲಗೊಳಿಸಿದ ಬಳಿಕ ಅಲ್ಲಿ ಕೋವಿಡ್-೧೯ಪ್ರಕರಣಗಳು ಒಮ್ಮೆಲೇ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಹಿಂದೆ ಕರ್ನಾಟಕದ ದ.ಕ.ಜಿಲ್ಲೆ ಕೇರಳ ಗಡಿ ಬಂದ್ ನಡೆಸಿದಾಗ ಪಿಣರಾಯಿ ಸರಕಾರ ನ್ಯಾಯಾಲಯದ ಕಟ್ಟೆ ಏರಿ ವಿವಾದ ಸೃಷ್ಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.