Wednesday, August 17, 2022

Latest Posts

ಅಂತಾರಾಜ್ಯ ಮುಕ್ತ ಸಂಚಾರಕ್ಕೆ ಕೇಂದ್ರ ಅಸ್ತು: ಪ್ರಯಾಣಕ್ಕೆ ಯಾವ ಪರ್ಮಿಟ್, ಪಾಸ್ ಬೇಕಿಲ್ಲ

ಹೊಸದಿಲ್ಲಿ : ಕೋವಿಡ್ ಹಿನ್ನೆಲೆಯಲ್ಲಿ ಅಂತಾರಾಜ್ಯಗಳ ನಡುವಣ ಸರಕು ಹಾಗೂ ಪ್ರಯಾಣಿಕರ ಮುಕ್ತ ಸಂಚಾರಕ್ಕೆ ಉಂಟಾಗಿದ್ದ ಎಲ್ಲ ನಿರ್ಬಂಧಗಳನ್ನು ಕೇಂದ್ರ ಸರ್ಕಾರವೀಗ ಸಂಪೂರ್ಣ ಸಡಿಲಗೊಳಿಸಿದೆ.
ಈ ಸಂಬಂಧ ಶನಿವಾರ ಸಂಜೆ ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿ ಅಜಯ್ ಭಲ್ಲ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಸಂಬಂಧಿತ ಅಧಿಕಾರವರ್ಗಕ್ಕೆ ಅಧಿಕೃತ ಆದೇಶವೊಂದನ್ನು ಜಾರಿಗೊಳಿಸಿದ್ದಾರೆ. ಇನ್ನು ಮುಂದೆ ಒಂದು ರಾಜ್ಯದಿಂದ, ಮತ್ತೊಂದು ರಾಜ್ಯಕ್ಕೆ ಪ್ರಯಾಣಿಸಲು ಯಾವುದೇ ಪರವಾನಗಿ, ಇ ಪಾಸ್ ಅಥವಾ ಪರ್ಮಿಟ್ ಬೇಕಿಲ್ಲ ಎಂದೂ ಗೃಹ ಇಲಾಖೆಯ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಇಲ್ಲಿಯವರೆಗೂ ಅಂತಾರಾಜ್ಯ ಪ್ರಯಾಣಕ್ಕೆ ರಾಜ್ಯಗಳು ಇ ಪಾಸ್ ನಿಬಂಧನೆ ವಿಧಿಸಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!