Friday, August 12, 2022

Latest Posts

ಅಂತಾರಾಷ್ಟ್ರೀಯ ವಂಚಕ ಜಾಲದಿಂದ ನಕಲಿ ಕೋವಿಡ್-19 ಕಿಟ್: ರಾಜ್ಯಗಳಿಗೆ ಸಿಬಿಐ ಎಚ್ಚರಿಕೆ!

ಹೊಸದಿಲ್ಲಿ: ಚೀನಾದಿಂದ ಹರಡಿರುವ ಕೋವಿಡ್-19 ಹೆಮ್ಮಾರಿಯ ವಿರುದ್ಧ ಜಗತ್ತು ಹೋರಾಟ ನಡೆಸುತ್ತಿದ್ದರೆ, ಈ ಸಂದರ್ಭವನ್ನೇ ವಂಚನೆಗೆ ಬಳಸಲೆತ್ನಿಸುತ್ತಿರುವ ಅಂತಾರಾಷ್ಟ್ರೀಯ ಕ್ರಿಮಿನಲ್ ವಂಚಕ ಜಾಲವೊಂದು ನಕಲಿ ಕೋವಿಡ್-19 ಪರೀಕ್ಷಾ ಕಿಟ್, ವೈದ್ಯಕೀಯ ಕಿಟ್‌ಗಳ ಹೆಸರಿನಲ್ಲಿ ಕಾರ್ಯಾಚರಿಸುತ್ತಿರುವ ಬಗ್ಗೆ ಸಿಬಿಐ ಎಲ್ಲ ರಾಜ್ಯಗಳನ್ನು ಎಚ್ಚರಿಸಿದೆ. ಈ ವಂಚನಾ ಜಾಲದ ಬಗ್ಗೆ ಹೆಚ್ಚಿನ ವಿವರ ನೀಡದ ಸಿಬಿಐ ಇಂಟರ್‌ಪೋಲ್ ಜೊತೆ ಸೇರಿ ಅಂತಹ ಜಾಲದ ಮೇಲೆ ನಿಗಾ ಇಟ್ಟಿದೆ ಎನ್ನಲಾಗಿದೆ.
ನಕಲಿ ಕೋವಿಡ್-೧೯ಟೆಸ್ಟ್ ಕಿಟ್, ನಕಲಿ ಔಷಧಿ, ವೈದ್ಯಕೀಯ ಉಪಕರಣಗಳ ಪೂರೈಕೆ ಹೆಸರಿನಲ್ಲಿ ಆಸ್ಪತ್ರೆಗಳನ್ನು ಗುರಿಯಾಗಿರಿಸಿ ಕಾರ್ಯಾಚರಿಸುತ್ತಿದ್ದು, ಇದರ ಹಿಂದೆ ಭಾರೀ ಹಣಕಾಸು ವಂಚನಾ ಜಾಲ ಕಾರ್ಯಾಚರಿಸುತ್ತಿರುವ ಬಗ್ಗೆ ಇಂಟರ್‌ಪೋಲ್ ಎಚ್ಚರಿಸಿದ ಬೆನ್ನಿಗೇ ಸಿಬಿಐ ವಿವಿಧ ರಾಜ್ಯಗಳ ಪೊಲೀಸರನ್ನು ಎಚ್ಚರಿಸಿದೆ.
ಇಂತಹ ವಂಚನಾ ಜಾಲ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ ಎನ್ನಲಾಗಿದ್ದು, ಈ ಬಗ್ಗೆ ಮಾಹಿತಿ ಬಂದ ಕೂಡಲೇ ಜಾಗೃತವಾಗಿರುವ ಸಿಬಿಐ ಇಂಟರ್‌ಪೋಲ್‌ನ ಸಹಕಾರದೊಂದಿಗೆ ಕಾರ್ಯಾಚರಣೆಗಿಳಿದಿದ್ದು, ಎಲ್ಲ ಇಂಟರ್‌ಪೋಲ್ ಲೈಸನ್ ಅಕಾರಿಗಳನ್ನು ಎಚ್ಚರಿಸಿದೆ. ಈ ಎಚ್ಚರಿಕೆಯಲ್ಲಿ ಇಂಟರ್‌ಪೋಲ್ ಯಾವುದೇ ಭಾರತೀಯ ಕಂಪೆನಿಯ ಹೆಸರನ್ನು ಉಲ್ಲೇಖಿಸಿಲ್ಲ.ಆದರೆ ಈ ಬಗ್ಗೆ ಯಾವುದೇ ಹೆಚ್ಚಿನ ವಿವರ ನೀಡದ ಸಿಬಿಐ ಇಂತಹ ವಿವರ ಬಹಿರಂಗಪಡಿಸಿದ್ದೇ ಆದಲ್ಲಿ ಅಂತರ ವಂಚನಾ ಜಾಲ ಎಚ್ಚೆತ್ತುಕೊಳ್ಳಬಹುದೆಂದು ಹೇಳಲಾಗಿದೆ.ಆದರೆ ಇಂತಹ ಜಾಲದ ಮೇಲೆ ತನಿಖಾ ಸಂಸ್ಥೆ ನಿಗಾ ಇಟ್ಟಿದೆ ಎನ್ನಲಾಗಿದೆ.
ಭಾರತ ಕೋವಿಡ್-೧೯ಟೆಸ್ಟ್ ಕಿಟ್‌ಗಳಿಗಾಗಿ ಬಹುವಾಗಿ ಆಮದನ್ನು ನೆಚ್ಚಿಕೊಂಡಿದ್ದು, ಈಗಿನ ಬಿಕ್ಕಟ್ಟನ್ನೇ ದುರುಪಯೋಗಪಡಿಸಿಕೊಂಡು ಇಂತಹ ವಂಚನಾ ಜಾಲಗಳು ಆಮದುದಾರ ಕಂಪೆನಿಗಳನ್ನು ದಿಕ್ಕು ತಪ್ಪಿಸುವ ಅಪಾಯವಿದೆ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss