ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಗೂ ತಗುಲಿದ ಕೊರೋನಾ ಬಿಸಿ: 17 ವರ್ಷಗಳ ಬಳಿಕ ಕನಿಷ್ಠ ದರ

0
84

ಹೊಸದಿಲ್ಲಿ: ಇಡೀ ವಿಶ್ವವೇ ಕೊರೋನಾ ವೈರಸ್ ಭೀತಿಯಿಂದ ಪರದಾಡುತ್ತಿರುವ ವೇಳೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲೂ ತಲ್ಲಣ ಸೃಷ್ಟಿಯಾಗಿದೆ. ಏಷ್ಯಾ ತೈಲ ಮಾರುಕಟ್ಟೆ ನಷ್ಟ ಅನುಭವಿಸುತ್ತಿದ್ದು, ತೈಲ ದರ ಕಳೆದ 17 ವರ್ಷಗಳಲ್ಲಿನ ಕನಿಷ್ಠ ಮೊತ್ತವನ್ನು ತಲುಪಿದೆ.

ಅಮೇರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮಿಡಿಯೆಟ್ ಮಾರುಕಟ್ಟೆ ಶೇ.6.5ರಷ್ಟು ಇಳಿಕೆಯಾಗಿದೆ. ಬ್ಯಾರೆಲ್ ಗೆ 23 ಡಾಲರ್ (1500 ರೂ) ಗೆ ಕುಸಿದಿದೆ. ಅಂತಾರಾಷ್ಟ್ರೀಯ ಬ್ರೆಂಟ್ ತೈಲ ಮಾರುಕಟ್ಟೆ ಶೇ.5.3 ರಷ್ಟು ಕುಸಿದು ಒಂದು ಬ್ಯಾರೆಲ್ ಗೆ 23 ಡಾಲರ್ (1730 ರೂ)ಗೆ ಇಳಿಕೆಯಾಗಿದೆ.

ವಿಶ್ವದ ಹಲವು ರಾಷ್ಟ್ರಗಳು ಕೊರೋನಾ ಸೋಂಕನ್ನು ತಡೆಗಟ್ಟಲು ಲಾಕ್ ಡೌನ್ ಆದೇಶಿಸಿದೆ. ಇದರಿಂದಾಗಿ ಅಂತಹ ರಾಷ್ಟ್ರಗಳಲ್ಲಿ ವಾಹನ ಸಂಚಾರಕ್ಕೆ ನಿರ್ಭಂಧನೆ ಹೇರಲಾಗಿದ್ದು, ತೈಲ ಮಾರುಕಟ್ಟೆ ಕುಸಿಯಲು ಕಾರಣವಾಗಿದೆ.

ಅಮೇರಿಕದಲ್ಲಿ ಈಗಾಗಲೇ 1.4 ಲಕ್ಷಕ್ಕೂ ಅಧಿಕ ಮಂದಿಗೆ ಸಂಕು ತಗುಲದ್ದು, 2450ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಸಾವಿನ ಸಂಗ್ಯೆ 30ಕ್ಕೇರಿದ್ದು, ಸೋಂಕಿತರ ಸಂಖ್ಯೆ 1000ಕ್ಕೂ ಅಧಿಕವಾಗಿದೆ. ವಿಶ್ವದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿದ್ದು ಈಗಾಗಲೇ ಮೃತಪಟ್ಟವರ ಸಂಖ್ಯೆ 33 ಸಾವಿರದಾಟಿದೆ.

LEAVE A REPLY

Please enter your comment!
Please enter your name here