ನವದೆಹಲಿ: ಇಂದು ಬಾಬರಿ ಕಟ್ಟಡ ಧ್ವಂಸ ಪ್ರಕರಣದ ತೀರ್ಪು ಪ್ರಕಟವಾಗಿದ್ದು, ಲಕ್ನೋ ಸಿಬಿಐ ಕೋರ್ಟ್ನ ವಿಶೇಷ ನ್ಯಾಯಾಧೀಶರಾದ ಎಸ್.ಕೆ. ಯಾದವ್ ತಮ್ಮ ನಿವೃತ್ತಿ ದಿನವೇ ಅಂತಿಮ ತೀರ್ಪು ಪ್ರಕಟಿಸಿದ್ದಾರೆ.
2019ರಲ್ಲೇ ಸೇವೆಯಿಂದ ನಿವೃತ್ತರಾಗಿದ್ದ 60 ವರ್ಷದ ಎಸ್.ಕೆ. ಯಾದವ್ ಅವರ ಸೇವಾ ಅವಧಿಯನ್ನು ಸುಪ್ರೀಂ ಕೋರ್ಟ್ ಮುಂದುವರಿಸಲು ಆದೇಶ ನೀಡಿತ್ತು. 2005 ರಿಂದ ಈ ಪ್ರಕರಣದ ವಿಚಾರಣೆಯನ್ನು ಯಾದವ್ ಅವರೇ ನಡೆಸುತ್ತಿದ್ದರು.
ಎರಡು ವರ್ಷಗಳಲ್ಲಿ ಈ ಪ್ರಕರಣದ ಅಂತಿಮ ತೀರ್ಪನ್ನು ನೀಡುವಂತೆ ಸುಪ್ರೀಂ ಯಾದವ್ ಅವರಿಗೆ ಸೂಚಿಸಿತ್ತು. ಇಂದು ಅಂತಿಮ ತೀರ್ಪು ಪ್ರಕಟಿಸಿ ಯಾದವ್ ಅವರು ಸೇವೆಯಿಂದ ನಿವೃತ್ತರಾಗಿದ್ದಾರೆ.