ಹೊಸದಿಗಂತ ಆನ್ಲೈನ್ ಡೆಸ್ಕ್:
ಬ್ರಿಟನ್ನಲ್ಲಿ ತಲೆಮರೆಸಿಕೊಂಡಿರುವ ಭಾರತೀಯ ಉದ್ಯಮಿ ವಿಜಯ ಮಲ್ಯ ಗಡಿಪಾರು ಅಷ್ಟೇನೂ ಸುಲಭವಲ್ಲ.
ಈ ಬಗ್ಗೆ ಮಂಗಳವಾರ ಸ್ಪಷ್ಟನೆ ನೀಡಿರುವ ಬ್ರಿಟನ್ ಸರ್ಕಾರ, ಮಲ್ಯ ಗಡಿಪಾರು ಮಾಡಬೇಕಾದರೆ ಮೊದಲು ರಹಸ್ಯ ಕಾನೂನು ವಿಚಾರಗಳು ಇತ್ಯರ್ಥವಾಗಬೇಕು ಎಂದು ಹೇಳಿದೆ.
ಬ್ಯಾಂಕ್ಗಳಿಗೆ ನೂರಾರು ಕೋಟಿ ರೂ. ಹಿಂದಿರುಗಿಸದೆ ವಂಚಿಸಿರುವ ಆರೋಪ ಎದುರಿಸುತ್ತಿರುವ ಮದ್ಯದ ದೊರೆ, ಉದ್ಯಮಿ ವಿಜಯ ಮಲ್ಯನ ಗಡಿಪಾರು ಮಾಡುವಂತೆ ಭಾರತ ಸರಕಾರ ಬ್ರಿಟನ್ಗೆ ಮನವಿ ಮಾಡಿತ್ತು. ಈ ಮನವಿಯ ವಿರುದ್ಧ ಮೇ ತಿಂಗಳಲ್ಲಿ ಮಲ್ಯ ಬ್ರಿಟಿಷ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಮಲ್ಯ ಅರ್ಜಿ ವಿಚಾರಣೆ ಪ್ರಗತಿಯಲ್ಲಿದ್ದು, ಮಲ್ಯರನ್ನು ಗಡಿಪಾರು ಮಾಡಬೇಕಾದರೆ ಕೆಲವು ಅಗತ್ಯ ರಹಸ್ಯ ಕಾನೂನು ವಿಚಾರಗಳು ಇತ್ಯರ್ಥವಾಗಬೇಕು. ಇದು ಕಾನೂನಿಗೆ ಸಂಬಂಧಪಟ್ಟ ವಿಚಾರ. ಈಗ ಅದರ ಬಗ್ಗೆ ಪ್ರತಿಕ್ರಿಯೆ ನೀಡುವುದು ಸಾಧ್ಯವಿಲ್ಲ ಎಂದು ಬ್ರಿಟನ್ನ ಆಯಕ್ಟಿಂಗ್ ಹೈಕಮಿಷನರ್ ಜ್ಯಾನ್ ಥಾಮ್ಸನ್ ಸ್ಪಷ್ಟಪಡಿಸಿದ್ದಾರೆ.
ಭಾರತ ಮತ್ತು ಬ್ರಿಟನ್ ಈ ಕಾನೂನು ವಿಚಾರಗಳನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಇದನ್ನು ಶೀಘ್ರವೇ ಬಗೆಹರಿಸುವುದಕ್ಕೆ ನಾವು ಪ್ರಯತ್ನಿಸುತ್ತಿದ್ದೇವೆ ಎಂದೂ ಅವರು ಹೇಳಿದ್ದಾರೆ.