Tuesday, June 28, 2022

Latest Posts

ಅಂತ್ಯಸಂಸ್ಕಾರಕ್ಕೆ ಬಂದವರ ಮೇಲೆ ಚಿತಾಗಾರ ಕಟ್ಟಡ ಕುಸಿತ: 18ಕ್ಕೂ ಹೆಚ್ಚು ಮಂದಿ ಸಾವು

ಹೊಸ ದಿಗಂತ ಆನ್ ಲೈನ್ ಡೆಸ್ಕ್

ದೆಹಲಿ ಸಮೀಪದ ಉತ್ತರ ಪ್ರದೇಶ ರಾಜ್ಯದ ಘಾಜಿಯಾಬಾದ್​ನ ಮುರದ್​ನಗರ್​ನಲ್ಲಿ ಚಿತಾಗಾರವೊಂದರ ಛಾವಣೆ ಕುಸಿತು 18ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಈ ದುರಂತದಲ್ಲಿ ಕಟ್ಟಡದ ಅವಶೇಷಗಳಡಿ ಇನ್ನೂ ಅನೇಕರು ಸಿಲುಕಿದ್ದು , ಎನ್​ಡಿಆರ್​ಎಫ್ ಮತ್ತು ಪೊಲೀಸರ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಕುಸಿತಗೊಂಡ ಛಾವಣಿಯು ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಭಾಗಕ್ಕೆ ಸೇರಿದ್ದಾಗಿತ್ತು. ಅವಘಡಕ್ಕೆ ಸಿಲುಕಿದವರಲ್ಲಿ ಬಹುತೇಕ ಮಂದಿ ರಾಮ್ ಧನ್ ಎಂಬ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರಕ್ಕೆ ಬಂದಿದ್ದವರಾಗಿದ್ದು , ಮಳೆ ಬೀಳುತ್ತಿದ್ದರಿಂದ ಆಶ್ರಯ ಪಡೆಯಲು ನಿರ್ಮಾಣ ಹಂತದಲ್ಲಿದ್ದ ಈ ಕಟ್ಟಡದೊಳಗೆ ಅವರು ಬಂದಿದ್ದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss