Thursday, August 18, 2022

Latest Posts

ಅಂಪ್ಫಾನ್ ಚಂಡಮಾರುತದ ತೀವ್ರತೆ ಹೆಚ್ಚಳ: ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಜನರ ಸ್ಥಳಾಂತರ

ಹೊಸದಿಲ್ಲಿ: ಅಂಪ್ಫಾನ್ ಚಂಡಮಾರುತ ಮುಂದಿನ 24 ಗಂಟೆಗಳಲ್ಲಿ ತೀವ್ರ ಸ್ವರೂಪಕ್ಕೆ ತಿರುಗಲಿದ್ದು ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಭಾಗದಲ್ಲಿ ಭಾರೀ ಅನಾಹುತದ ಸುಳಿವು ನೀಡಿದೆ.

ಹವಾಮಾನ ಇಲಾಖೆ ಅಂಫಾನ್ ಚಂಡಮಾರುತದ ತೀವ್ರತೆಯನ್ನು ವಿವರಿಸಿದ ಬೆನ್ನಲ್ಲೇ NDRF ಬಂಗಾಳ ‌ಮತ್ತು ಒಡಿಶಾದ ಕರಾವಳಿ ಪ್ರದೇಶದಲ್ಲಿ 37 ರಕ್ಷಣಾ ತಂಡಗಳನ್ನು ನಿಯೋಜಿಸಿದೆ. ಪಶ್ಚಿಮ ಬಂಗಾಳದ ಕರಾವಳಿ ಭಾಗದಲ್ಲಿ ಭೂ ಕುಸಿತ ಆಗುವ ಸಂಭವವಿದ್ದು ಅಪಾಯ ಸ್ಥಳದಲ್ಲಿ ವಾಸವಿದ್ದ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

ವಿದ್ಯುತ್, ದೂರಸಂಪರ್ಕ ಹಾಗೂ ಅಗತ್ಯ ಸೇವೆ ಸಲ್ಲಿಸುವ ಇಲಾಖೆಗಳಿಗೆ ಯಾವುದೇ ಕ್ಷಣದಲ್ಲಿಯೂ ಕಾರ್ಯಾಚರಿಸಲು ಸಿದ್ದರಿರುವಂತೆ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ನಿರ್ದೇಶನ ನೀಡಿದ್ದಾರೆ.

ಬಂಗಾಳ ಕೊಲ್ಲಿಯ ಉತ್ತರದಲ್ಲಿ ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಸೂಚಿಸಲಾಗಿದ್ದು ಬಿಹಾರ, ತ್ರಿಪುರದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ದೆಹಲಿ ಹವಾಮಾನದಲ್ಲೂ ಏರುಪೇರಾಗಲಿದೆ. ಗಂಟೆಗೆ 160 ರಿಂದ 200 ಕಿ.ಮೀ ವೇಗದಲ್ಲಿ ಬೀಸುವ ಚಂಡಮಾರುತದ ಪರಿಣಾಮ ರಾಜ್ಯದಲ್ಲಿಯೂ ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣದ ಜೊತೆಗೆ ಕರಾವಳಿ, ಮಲೆನಾಡು ಭಾಗಗಳಲ್ಲಿ ಸಾಧಾರಣ ದಿಂದ ಭಾರೀ ಮಳೆಯಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!