Saturday, August 13, 2022

Latest Posts

‘ಅಂಫಾನ್‌’ಗೂ ಮೊದಲೇ ‘ವರುಣ ಮೃದಂಗ’: ಜಡಿ ಮಳೆಗೆ ತತ್ತರಿಸಿದ ಒಡಿಶಾ ರಾಜ್ಯ

ನವದೆಹಲಿ: ‘ಅಂಫಾನ್‌’ ಗೂ ಮೊದಲೇ ಕಾಣಿಸಿಕೊಂಡಿರುವ ಭಾರೀ ಗಾಳಿ ಮಳೆಗೆ ಒಡಿಶಾ ತತ್ತರಿಸಿದೆ.
ಒಡಿಶಾದ ಭದ್ರಕ್, ಪಾರಾದೀಪ್, ಬಾಲಾಸೋರ್, ಚಂಡೀಪುರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆ ಆರಂಭವಾಗಿದ್ದು ಕರಾವಳಿ ಭಾಗಗಳಲ್ಲಿ 4-5 ಮೀಟರ್ ಎತ್ತರದ ಸಮುದ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ.
ಎಲ್ಲೆಡೆ ಕಟ್ಟೆಚ್ಚರ ಘೋಷಿಸಲಾಗಿದ್ದು ಭಾರತೀಯ ಕರಾವಳಿ ಕಾವಲು ಪಡೆ 20 ರಕ್ಷಣಾ ತುಕಡಿಗಳನ್ನು ನಿಯೋಜಿಸಿದ್ದು, ಹೆಲಿಕಾಪ್ಟರ್‌ಗಳು, ಹಾಗೂ ಹಡಗುಗಳನ್ನು ರಕ್ಷಣಾ ಕಾರ್ಯಕ್ಕಾಗಿ ಅಲರ್ಟ್ ಆಗಿವೆ. ಈ ನಡುವೆ ಟ್ವೀಟ್‌ ಮಾಡಿರುವ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನಕರ್ ಅವರು, ಕೊರೊನಾ ಸೋಂಕು ಹಾಗೂ ಈಗ ಕಾಣಿಸಿಕೊಂಡಿರುವ ಅಂಫಾನ್‌ ಚಂಡಮಾರುತ ಎರಡೂ ನಮಗೆ ಭೀಕರ ಸವಾಲು. ಸರ್ಕಾರದ ನಿರ್ದೇಶನ ಜನರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss