ಹೊಸದಿಲ್ಲಿ: ಅಂಫಾನ್ ಚಂಡಮಾರುತವು ಇದೀಗ ಅತ್ಯಂತ ಪ್ರಬಲ ಚಂಡಮಾರುತವಾಗಿ ಮಾರ್ಪಟುಗೊಂಡಿದೆ. ಎಷ್ಟೆಂದರೆ1999ರ ಬಳಿಕ ಬಂಗಾಲ ಕೊಲ್ಲಿಯಲ್ಲಿ ರೂಪುಗೊಂಡ ಅತ್ಯಂತ ಪ್ರಬಲ ಚಂಡಮಾರುತವಿದು ಎಂದು ಪರಿಗಣಿಸಲ್ಪಟ್ಟಿದೆ.
ಈ ಚಂಡಮಾರುತವು ನಾಳೆ ಅಥವಾ ನಾಡಿದ್ದು ಪಶ್ಚಿಮ ಬಂಗಾಳಕ್ಕೆ ಪ್ಪಳಿಸುವ ಸಾಧ್ಯತೆಗಳಿವೆ. ನೆರೆಯ ಒಡಿಸ್ಸಾ ಮತ್ತು ಬಾಂಗ್ಲಾ ದೇಶಗಳು ಕೂಡ ಚಂಡಮಾರುತದ ಹೊಡೆತಕ್ಕೆ ಈಡಾಗುವ ಸಾಧ್ಯತೆಗಳಿವೆ.
ಪ್ರಸ್ತುತ ಈ ಚಂಡಮಾರುತವು ಗಂಟೆಗೆ 270 ಕಿಮೀ. ವೇಗ ಪಡೆದಿದೆ ಎಂದು ಅಮೆರಿಕದ ಚಂಡಮಾರುತ ಮುನ್ನೆಚ್ಚರಿಕಾ ಸಂಸ್ಥೆ ವರದಿ ಮಾಡಿದೆ. ಇದು ಅಟ್ಲಾಂಟಿಕ್ನಲ್ಲಿ ರೂಪುಗೊಳ್ಳುವ ಬಲಿಷ್ಠ 4ನೇ ಮಾದರಿಯ ಚಂಡಮಾರುತಕ್ಕೆ ಸಮನಾಗಿದೆ ಎಂದು ಅದು ಹೇಳಿದೆ. ಗಂಟೆಗೆ 240 ಕಿಮೀ.ಗಿಂತ ಹೆಚ್ಚು ವೇಗವುಳ್ಳ ಚಂಡಮಾರುತವನ್ನು ಸೂಪರ್ ಸೈಕ್ಲೋನ್ ಎಂದು ವರ್ಗೀಕರಿಸಲಾಗುತ್ತದೆ.
1999ರಲ್ಲಿ ಇಷ್ಟೇ ಪ್ರಬಲ ಚಂಡಮಾರುತವು ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿತ್ತು.15,000 ಗ್ರಾಮಗಳು ಇದರಿಂದ ಬಾಧೆಗೊಳಗಾಗಿ 10,000ಕ್ಕೂ ಹೆಚ್ಚು ಜನ ಸತ್ತಿದ್ದರು.