Monday, August 15, 2022

Latest Posts

ಅಂಫಾನ್ ಎಫೆಕ್ಟ್ ಗೆ ಕರಾವಳಿ ತತ್ತರ: ಭಾರೀ ಗಾಳಿಯೊಂದಿಗೆ ಮಳೆಯ ಭರ್ಜರಿ ಎಂಟ್ರಿ!

ಮಂಗಳೂರು: ಬಂಗಾಳ ಕೊಲ್ಲಿಯಲ್ಲಿ ಆರಂಭವಾದ ಅಂಪಾನ್ ಚಂಡ ಮಾರುತದ ಪ್ರಭಾವ ಕರಾವಳಿಗೂ ತಟ್ಟಿದೆ. ಸೋಮವಾರ ಮುಂಜಾನೆಯಿಂದಲೇ ಭಾರೀ ಗಾಳಿ ಮಳೆಯಾಗುತ್ತಿದ್ದು ಕಾದ ಇಳೆ ತಂಪಾಗಿದೆ.
ಮಂಗಳೂರಿನಲ್ಲಿ ಬೆಳಗ್ಗೆ 5ಗಂಟೆಯಿಂದಲೇ ಭಾರೀ ಗಾಳಿಯೊಂದಿಗೆ ಮಳೆಯ ಎಂಟ್ರಿಯಗಿದ್ದು ಉತ್ತಮ ಮಳೆಯಾಗುತ್ತಿದೆ. ಭಾನುವಾರ ರಾತ್ರಿ ಗುಡುಗು ಮಿಂಚಿನ ಆರ್ಭಟವಿತ್ತು. ಆದರೆ ತುಂತುರು ಮಳೆಯೊಂದಿಗೆ ಕೊನೆಯಾಗಿತ್ತು. ಆದರೆ ರಾತ್ರಿ ಗಾಳಿಯ ಆರ್ಭಟ ಮಾತ್ರ ಜೋರಾಗಿತ್ತು. ಬೆಳಗಾಗುತ್ತಿದ್ದಂತೆ ಮಳೆ ಮತ್ತೆ ಜೋರಾಗಿ ಆರಂಭವಾಗಿದೆ. ಹವಾಮಾನ ಇಲಾಖೆ ಎರಡು ದಿನಗಳ ಹಿಂದೆಯೇ ಭಾರೀ ಗಾಳಿ ಮಳೆಯಾಗುವ ಸೂಚನೆ ನೀಡಿತ್ತು.
ಚಂಡಮಾರುತ ಪ್ರಭಾವದಿಂದ ರಾಜ್ಯದ ದಕ್ಷಿಣ ಒಳನಾಡು ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ‘ಯೆಲ್ಲೋ ಅಲರ್ಟ್’ ಎಚ್ಚರಿಕೆ ನೀಡಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss