Thursday, August 18, 2022

Latest Posts

ಅಂಫಾನ್ ಚಂಡಮಾರುತಕ್ಕೆ ಬಂಗಾಳದಲ್ಲಿ 72 ಮಂದಿ, ಒಡಿಶಾದಲ್ಲಿ 2 ಬಲಿ

ಹೊಸದಿಲ್ಲಿ: ದೇಶದ ಬಂಗಾಳ ಮತ್ತು ಒಡಿಶಾ ರಾಜ್ಯಗಳಿಗೆ ಅಪ್ಪಳಿಸಿರುವ ಅಂಫಾನ್ ಚೆಂಡಮಾರುತಕ್ಕೆ 74 ಮಂದಿ ಬಲಿಯಾಗಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ 72 ಹಾಗೂ ಒಡಿಶಾದಲ್ಲಿ ಇಬ್ಬರು ಭೀಕರ ಚಂಡಮಾರುತಕ್ಕೆ ಬಲಿಯಾಗಿದ್ದಾರೆ. ಬಾಂಗ್ಲಾದೇಶದಲ್ಲಿ 13 ಮಂದಿ ಜೀವ ಕಳೆದುಕೊಂಡಿದ್ದಾರೆ.

ಕರಾವಳಿ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದ್ದು, ಭಾರಿ ಬಿರುಗಾಳಿ ಮಳೆಗೆ ಭೂಕುಸಿತ ಉಂಟಾಗಿದೆ. ಚಂಡಮಾರುತಕ್ಕೆ ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆ ಉಂಟಾಗಿದ್ದು, ಕೊಲ್ಕತ್ತ ಅಕ್ಷರಶಃ ಜಲಾವೃತವಾಗಿದೆ. ನಗರದ ವಿಮಾನ ನಿಲ್ದಾಣ ಸೇರಿದಂತೆ ರಸ್ತೆಗಳು ನೀರುನಿಂದ ಮುಳುಗಡೆಯಾಗಿದ್ದು, ಮರಗಳು ಧರೆಗುರುಳಿವೆ.

ಬಂಗಾಳದಲ್ಲಿ ಮೃತಪಟ್ಟವರಲ್ಲಿ 15 ಮಂದಿ ಕೊಲ್ಕತದವರಾಗಿದ್ದು, ಮುಖ್ಯಮಂತ್ರಿ ಮಮತ ಬ್ಯಾನರ್ಜಿ ಅಂಫಾನ್ ಚಂಡಮಾರುತದಿಂದ ಮೃತಪಟ್ಟವರ ಕುಟುಂಬಗಳಿಗೆ 2.5 ಲಕ್ಷ ರೂ ಪರಿಹಾರ ನೀಡಲಿದ್ದಾರೆ.

ಶುಕ್ರವಾರ ಬೆಳಗ್ಗೆ 10 ಗಂಟೆಗೆ ಪ್ರಧಾನಿ ಮೋದಿ ಬಂಗಾಳ ಹಾಗೂ ಒಡಿಶಾಗೆ ಭೇಟಿ ನೀಡಲಿದ್ದು, ಅಂಫಾನ್ ಚಂಡಮಾರುತದಿಂದ ಆಗಿರುವ ಅನಾಹುತಗಳ ಸಮೀಕ್ಷೆ ನಡೆಸಲಿದಾರೆ.

24 ಗಂಟೆಗಳಲ್ಲಿ ಒಡಿಶಾ ಸಹಜ ಸ್ಥಿತಿಗೆ: ಮುಂದಿನ 24 ಗಂಟೆಗಳಲ್ಲಿ ಅಂಫಾನ್ ಚಂಡಮಾರುತದ ಪ್ರಭಾವ ತಗ್ಗಲಿದ್ದು ಒಡಿಶಾ ಸಾಮಾನ್ಯ ಸ್ಥಿತಿಗೆ ಮರಳಲಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ  ಪಡೆ(ಎನ್ ಡಿ ಆರ್ ಎಫ್) ಮಹಾನಿರ್ದೇಶಕ ಎಸ್.ಎಸ್. ಪ್ರಧಾನ್ ಗುರುವಾರ ತಿಳಿಸಿದ್ದಾರೆ. ಒಡಿಶಾದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಮುಂದಿನ 24 ಗಂಟೆಗಳಲ್ಲಿ ಸಹಜ ಸ್ಥಿತಿ ಬರಲಿದೆ ಎಂದು ಹವಾಮಾನ ಇಲಾಖೆ ಪ್ರಧಾನ ನಿರ್ದೇಶಕ ಡಾ. ಮೃತ್ಯುಂಜಯ ಅವರೊಂದಿಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ್ ಹೇಳಿದ್ದಾರೆ.

ಈ ಬಗ್ಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, ಈ ಸವಾಲಿನ ಸಮಯದಲ್ಲಿ ಪಶ್ಚಿಮ ಬಂಗಾಳದ ಜೊತೆ ಇಡೀ ರಾಷ್ಟ್ರ ನಿಲ್ಲಲಿದೆ. ಜನರ ಅನುಕೂಲಕ್ಕೂ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಪಶ್ಚಿಮ ಬಂಗಾಳ ಸರ್ಕಾರದ ಜೊತೆ ಕೇಂದ್ರ ಸರ್ಕಾರ ನಿರಂತರ ಸಂಪರ್ಕದಲ್ಲಿದೆ. ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!