ಬೆಂಗಳೂರು: ಲಕ್ಷಾಂತರ ಜೀವಗಳನ್ನು ಅಪಾಯಕ್ಕೆ ತಳ್ಳುವ ಅಂಫಾನ್ ಚಂಡಮಾರುತ ಬಂಗಾಳಕೊಲ್ಲಿಗೆ ಅಪ್ಪಳಿಸಿದೆ. ಯಾವಾಗಲೂ ಚಂಡಮಾರುತಗಳಿಗೆ ಒಂದೊಂದು ವಿಶೇಷ ಹೆಸರು ಇರಲಿದ್ದು, ಈ ದಿಸೆಯಲ್ಲಿ ಅಂಫಾನ್ ಸಹ ಕುತೂಹಲ ಕೆರಳಿಸಿದೆ. ಹಾಗಾದೆ ಅಂಫಾನ್ ಎಂದರೇನು ಎಂಬುದಕ್ಕೆ ಮಾಹಿತಿ ಇಲ್ಲಿದೆ.
ಅಂಫಾನ್ ಅರ್ಥ: ಉಮ್-ಫನ್ ಎಂದು ಉಚ್ಚರಿಸಲಾಗುವ ಅಂಫಾನ್ ಎಂಬ ಪದ ಥಾಯ್ ಭಾಷೆಯಿಂದ ಹುಟ್ಟಿಕೊಂಡಿದೆ. ಇದರ ಅರ್ಥ ಆಕಾಶ. 2004ರಲ್ಲಿ ಥೈಲ್ಯಾಂಡ್ ಈ ಹೆಸರನ್ನು ಸೂಚಿಸಿದೆ.
ವಿಶ್ವಸಂಸ್ಥೆಯ ಏಷ್ಯಾ ಮತ್ತು ಫೆಸಿಫಿಕ್ ಗೆ ಆರ್ಥಿಕ ಮತ್ತು ಸಾಮಾಜಿಕ ಆಯೋಗ(ESCAP) ದ ವಿಶೇಷ ಸಂಸ್ಥೆಯಾದ ವಿಶ್ವ ಹವಾಮಾನ ಸಂಸ್ಥೆ(WMO)ಯ ಭಾಗವಾಗಿರುವ ಸದಸ್ಯ ರಾಷ್ಟ್ರಗಳ ಪಟ್ಟಿಯಿಂದ ಈ ಹೆಸರು ಆಯ್ಕೆ ಮಾಡಲಾಗಿದೆ.
ನಾಮಕರಣ: ಒಂದೇ ಸಮಯದಲ್ಲಿ ಅನೇಕ ಉಷ್ಣ ವಲಯದ ಬಿರುಗಾಳಿಗಳು ಸಂಭವಿಸಿದಾಗ ಗೊಂದಲ ಕಡಿಮೆಗೊಳಿಸಲು ಚಂಡಮಾರುತಗಳಿಗೆ ಹೆಸರು ನೀಡಲಾಗುತ್ತದೆ.
ಮುಂದಿನ ಚಂಡಮಾರುತಗಳು:
ಚಂಡಮಾರುತ | ದೇಶ |
ನಿಸರ್ಗಾ | ಬಾಂಗ್ಲಾದೇಶ |
ಗತಿ | ಭಾರತ |
ನಿವಾರ್ | ಇರಾನ್ |
ಬುರವಿ | ಮಾಲ್ಡೀವ್ಸ್ |
ಟೌಕ್ಟೇ | ಮ್ಯಾನ್ಮಾರ್ |
ಯಾಸ್ | ಒಮನ್ |