Sunday, June 26, 2022

Latest Posts

ಅಂಫಾನ್ ಚಂಡಮಾರುತ| ಕಾರ್ಯ ನಿರ್ವಹಿಸಿದ 50 NDRF ಸಿಬ್ಬಂದಿಗೆ ಕೊರೋನಾ ಸೋಂಕು

ಭುವನೇಶ್ವರ: ಅಂಫಾನ್ ಚಂಡಮಾರುತದ ವೇಳೆ ನೆರವಿಗೆ ತೆರಳಿದ್ದ 50 ಎನ್ ಡಿ ಆರ್ ಎಫ್ ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಒಡಿಶಾದ ಕಟಕ್ ಜಿಲ್ಲೆಯ ಮುಂಡಾಲಿಯಲ್ಲಿ ಅಂಫಾನ್ ಚಂಡಮಾರುತದಿಂದ ಹಾನಿಗೊಳಗಾಗ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 3 ನೇ ಬೆಟಾಲಿಯನ್  ನ 50 ಸಿಬ್ಬಂಧಿಗೆ ಕೊರೋನಾ ಸೋಂಕು ತಗುಲಿದೆ.

ಕೊಲ್ಕತ್ತಾ ಹಾಗೂ ಬಂಗಾಳಕ್ಕೆ ತೆರಳಿದ 167 ಸಿಬ್ಬಂದಿಗಳ 8 ತಂಡಗಳ ಸದಸ್ಯರನ್ನು ಕ್ವಾರಂಟೈನ್ ಗೆ ಒಳಪಡಿಸಲು ಸೂಚಿಸಲಾಗಿದೆ. ಎಲ್ಲರಿಗೂ ಕೊರೋನಾ ಪರೀಕ್ಷೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೊರೋನಾ ರೋಗ ಲಕ್ಷಣಗಳನ್ನು ಹೊಂದಿದ್ದ ಓರ್ವ ಸಿಬ್ಬಂದಿಯನ್ನು ಶನಿವಾರ ಅಶ್ವಿನಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, 13 ಮಂದಿಯನ್ನು ಕಿಮ್ಸ್ ಕೊರೋನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಲ್ಲಾ 50 ಮಂದಿಯೂ ಆರೋಗ್ಯವಾಗಿದ್ದು, ಅವರು ಶೀಘ್ರ ಗುಣಮುಖರಾಗುತ್ತಾರೆ. ಚಿಂತಿಸುವ ಅಗತ್ಯವಿಲ್ಲ ಎಂದು ಎನ್ ಡಿ ಆರ್ ಎಫ್ ಅಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss