ಪ.ಬಂಗಾಳ/ ಒಡಿಶಾ: ಅಂಫ್ಹಾನ್ ಚಂಡಮಾರುತದ ತೀವ್ರತೆ ಹೆಚ್ಚಾಗಿರುವ ಬೆನ್ನಲ್ಲೇ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಸರ್ಕಾರ ಜನರನ್ನು ಸುರಕ್ಷಿತ ಸ್ಥಳದತ್ತ ಸ್ಥಳಾಂತರ ಮಾಡುತ್ತಿದೆ. ಚಂಡ ಮಾರುತ ಅಪ್ಪಳಿಸುವ ಮೊದಲೇ ಬಿರುಗಾಳಿ ಸಹಿತ ಮಳೆಯಾಗಿರುವುದು ಜನರಲ್ಲಿ ಆತಂಕದ ವಾತಾವರಣ ಸೃಷ್ಟಿ ಮಾಡಿದೆ.
150 ಕಿ.ಮೀ ವೇಗದಲ್ಲಿ ಬೀಸುವ ಚಂಡಮಾರುತಕ್ಕೆ ಒಡಿಶಾದ ಪಾರಾದೀಪ್,ಚಂಡೀಪುರ್ ಸೇರಿದಂತೆ ಕೆಲವು ಭಾಗಗಳಲ್ಲಿ ಮುಂಜಾನೆಯೇ ಮಳೆ ಆರಂಭವಾಗಿದ್ದು ಚಂಡಮಾರುತ ಆರಂಭವಾಗುವ ಮೊದಲೇ ಸಮುದ್ರದ ಅಲೆಗಳು ಉಕ್ಕುತ್ತಿದ್ದು ಜನರು ಮನೆಯಿಂದ ಹೊರಬಾರದಂತೆ ಬಂಗಾಳ ಸರ್ಕಾರ ಸೂಚನೆ ನೀಡಿದೆ.
ಬುಧವಾರ ಮಧ್ಯಾಹ್ನದ ವೇಳೆಗೆ ಪ.ಬಂಗಾಳದ ಕರಾವಳಿಯತ್ತ ಅಪ್ಪಳಿಸಲಿದ್ದು ಸಮುದ್ರ ದ ಸುತ್ತ ಮುತ್ತಲಿನ ಜನರನ್ನು ಸ್ಥಳಾಂತರ ಗೊಳಿಸಿದಲ್ಲದೇ ಇನ್ನುಳಿದಂತೆ ಎಚ್ಚರವಹಿಸುವಂತೆ ತಿಳಿಸಲಾಗಿದೆ.ಎನ್ ಡಿ ಆರ್ ಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು ಕರಾವಳಿ ಪ್ರದೇಶದ 3 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಒರಿಸ್ಸಾದಲ್ಲೂ ಭಾರೀ ಮಳೆಯಾಗುತ್ತಿದ್ದು ಬಂಗಾಳದ ಸುಂದರ್ ಬನ ಪ್ರದೇಶದಲ್ಲಿ ಅನೇಕ ಹಾನಿಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕೊಲ್ಕತ್ತಾ ದಿಂದ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.