ಉಡುಪಿ: ಲಾಕ್ಡೌನ್ ಸಂದರ್ಭದಲ್ಲಿ ಪರಿಸರ ಮಾಲಿನ್ಯ ಕಡಿಮೆಯಾಗಿದೆ. ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಕೂಡ ಕಡಿಮೆಯಾಗಿದೆ. ಇದನ್ನು ಮುಂದೆ ಲಾಕ್ಡೌನ್ ಕೊನೆಗೊಂಡ ನಂತರವೂ ಈ ಕುರಿತು ಗಮನ ಕೊಡಬೇಕು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ ಹೇಳಿದರು.
ಅವರು ಅಂಬಲಪಾಡಿ ಗ್ರಾಮ ಪಂಚಾಯತ್ನ ಕಿದಿಯೂರು ಗರಡಿ ಬಳಿ ಗ್ರಾಮಸ್ಥರಿಗೆ ಅಕ್ಕಿ ಕಿಟ್ ಹಾಗೂ ಆಹಾರ ಧಾನ್ಯಗಳನ್ನು ವಿತರಿಸಿ ಮಾತನಾಡಿದರು.
ಪ್ರಮುಖರಾದ ಸಂಧ್ಯಾ ರಮೇಶ್, ರಾಧಾಕೃಷ್ಣ ಮೆಂಡನ್, ಗಿರೀಶ್ ಅಮೀನ್, ನವೀನ್ ಕುಂದರ್, ಜಗದೀಶ್ ಶೆಟ್ಟಿ, ಭರತ್ ಭೂಷಣ್, ರಾಮ್ ರಾಜ್ ಕಿದಿಯೂರು, ರಾಜೀವ ಪೂಜಾರಿ, ಸುಜಿತ್ ಕಪ್ಪೆಟ್ಟು, ಅಕ್ಷಯ್, ಸುಂದರ ಪೂಜಾರಿ, ವಿಷ್ಣು ಪೂಜಾರಿ, ಆಕಾಶ್ ಪೆರಂಪಳ್ಳಿ, ಮಹೇಶ್ ಕುಮಾರ್, ಪ್ರಜ್ವಲ್ ಕೋಟ್ಯಾನ್, ನಿತಿನ್ ಬಂಗೇರ ಮುಂತಾದವರಿದ್ದರು.