ಹೊಸದಿಗಂತ ವರದಿ ಮಂಗಳೂರು:
ಎರಡೂ ಮೂತ್ರಪಿಂಡಗಳು ವೈಫಲ್ಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕನೊಬ್ಬ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ದಾನಿಗಳ ನಿರೀಕ್ಷೆಯಲ್ಲಿದ್ದಾರೆ.
ಬಂಟ್ವಾಳ ತಾಲೂಕಿನ ಮೇರಮಜಲು ಗ್ರಾಮದ ಅಬ್ಬೆಟ್ಟು ನಿವಾಸಿ ದಿ.ಚೆನ್ನಪ್ಪ ಪೂಜಾರಿ ಹಾಗೂ ಕಲ್ಯಾಣಿ ದಂಪತಿಯ ಪುತ್ರ ಪ್ರವೀಣ್ ಕುಮಾರ್ ಅವರು ಕಿಡ್ನಿ ವೈಫಲ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಅಕ್ಕನ ಮಗಳ ಮದುವೆಯ ಸಂಭ್ರಮದಲ್ಲಿದ್ದ ಈ ಯುವಕನಿಗೆ ಎರಡೇ ದಿನದಲ್ಲಿ ಕಹಿ ಸುದ್ದಿ ಎದುರಾಗಿತ್ತು. ಮದುವೆಯ ಮರುದಿನ ರಾತ್ರಿ ಹೊಟ್ಟೆ ನೋವೆಂದು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಪರೀಕ್ಷಿಸಿದ ವೈದ್ಯರು ಎರಡೂ ಕಿಡ್ನಿ ವೈಫಲ್ಯಗೊಂಡಿರುವುದನ್ನು ಖಚಿತಪಡಿಸಿದ್ದಾರೆ.
ಕಿಡ್ನಿ ಕಸಿ ಮಾಡಿಸಿಕೊಳ್ಳಲು ಮೊದಲು ಪ್ರವೀಣ್ ಅವರ ಅಕ್ಕ ಕಿಡ್ನಿ ದಾನಕ್ಕೆ ಮುಂದಾದರು. ಆದರೆ ಅದು ಹೊಂದಿಕೆಯಾಗಲಿಲ್ಲ. ಈಗ ತಮ್ಮ ಪ್ರಶಾಂತ್ ಅಣ್ಣನಿಗೆ ತನ್ನ ಒಂದು ಕಿಡ್ನಿ ದಾನ ಮಾಡಲು ಮುಂದೆ ಬಂದಿದ್ದಾರೆ. ಇದೀಗ ಇಬ್ಬರ ಪರೀಕ್ಷೆಗಳೂ ಮುಗಿದಿದ್ದು ಪ್ರಶಾಂತ್ನ ಮೂತ್ರಪಿಂಡ ಹೊಂದಿಕೆಯಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಕಿಡ್ನಿ ಕಸಿ ಸೇರಿದಂತೆ ಚಿಕಿತ್ಸೆಗೆ ಸುಮಾರು 10 ಲಕ್ಷದಷ್ಟು ವೆಚ್ಚವಾಗಲಿದ್ದು, ಇಷ್ಟು ಹಣವನ್ನು ಭರಿಸುವ ಸ್ಥಿತಿಯಲ್ಲಿ ಇವರ ಕುಟುಂಬವಿಲ್ಲ. ಮಂಗಳೂರಿನ ಜ್ಯೋತಿ ಕೆಎಂಸಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ನಡೆಯುತ್ತಿದ್ದು, ವಾರಕ್ಕೆ 4,500 ದಷ್ಟು ಖರ್ಚು ಆಗುತ್ತಿದೆ. ನೆರವು ನೀಡುವ ದಾನಿಗಳು ಇವರನ್ನು ಸಂಪರ್ಕಿಸಬಹುದು.
ಯುವಕನ ಬ್ಯಾಂಕ್
ಖಾತೆ ವಿಳಾಸ
ನೆರವು ನೀಡುವವರು ಪ್ರವೀಣ್, ಕೆನರಾ ಬ್ಯಾಂಕ್ ದೇರಳಕಟ್ಟೆ ಬ್ರಾಂಚ್ ಅಕೌಂಟ್ ನಂಬರ್: 3326119000420 (ಐಊಖಇ ಇuಈಉಇಘ್ಕೆಆ 0003326) ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮೂಲಕ 9880040497 ನಂಬರ್ಗೆ ಹಣ ಪಾವತಿಸಬಹುದು. ಹೆಚ್ಚಿನ ಮಾಹಿತಿಗೆ 9902048968, 9902048918 ಸಂಖ್ಯೆಯನ್ನು ಸಂಪರ್ಕಿಸಬಹುದು.