Thursday, July 7, 2022

Latest Posts

ಅಕ್ಟೋಬರ್ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹ ದಾಟಿತು ಬರೋಬ್ಬರಿ 1.05 ಲ.ಕೋ.ರೂ.

ಹೊಸದಿಲ್ಲಿ: ಅಕ್ಟೋಬರ್ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹವು ೧.೦೫ ಲಕ್ಷ ಕೋ. ರೂ.ಗೆ ತಲುಪಿದ್ದು , ಈ ಮೂಲಕ ಈ ವರ್ಷದ ಫೆಬ್ರವರಿಯ ಬಳಿಕ ಇದೇ ಮೊದಲ ಬಾರಿಗೆ ಜಿಎಸ್‌ಟಿ ಸಂಗ್ರಹ ೧ ಲಕ್ಷ ಕೋ.ರೂ.ಗಳನ್ನು ಮೀರಿದೆ ಎಂದು ಕೇಂದ್ರ ವಿತ್ತ ಸಚಿವಾಲಯ ತಿಳಿಸಿದೆ.
ಸಚಿವಾಲಯದ ಪ್ರಕಟನೆಯಲ್ಲಿ ತಿಳಿಸಲಾಗಿರುವಂತೆ, ಅ.೩೧ರವರೆಗೆ ಸಲ್ಲಿಸಿದ ಒಟ್ಟು ಜಿಎಸ್‌ಟಿಆರ್ -೩ಬಿ ರಿಟರ್ನ್‌ಗಳ ಸಂಖ್ಯೆ ೮೦ ಲಕ್ಷವಾಗಿದೆ.ಅಕ್ಟೋಬರ್‌ನಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯ ೧,೦೫,೧೫೫ ಕೋ. ರೂ.ಗಳಾಗಿದೆ.ಇದರಲ್ಲಿ ಸಿಜಿಎಸ್‌ಟಿ ೧೯,೧೯೩ ಕೋ. ರೂ., ಎಸ್‌ಜಿಎಸ್‌ಟಿ ೫,೪೧೧ ಕೋ.ರೂ., ಐಜಿಎಸ್‌ಟಿ ೫೨,೫೪೦ ಕೋ. ರೂ. (ಈ ಪೈಕಿ ಸರಕು ಆಮದು ಮೇಲೆ ಸಂಗ್ರಹಿಸಿದ ೨೩,೩೭೫ ಕೋ. ರೂ.) ಮತ್ತು ಸೆಸ್ ೮,೦೧೧ ಕೋ. ರೂ. (ಸರಕು ಆಮದು ಮೇಲೆ ಸಂಗ್ರಹಿಸಿದ ೯೩೨ ಕೋ. ರೂ. ಸಹಿತ) ಗಳಾಗಿವೆ.
ಕಳೆದ ವರ್ಷದ ಇದೇ ತಿಂಗಳಲ್ಲಿ ಸಂಗ್ರಹಿಸಿದ ಆದಾಯಕ್ಕೆ ಹೋಲಿಸಿದರೆ ಈ ಬಾರಿಯ ಆದಾಯವು ಶೇ. ೧೦ ರಷ್ಟು ಹೆಚ್ಚು ಎಂಬುದು ಗಮನಾರ್ಹವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss