ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಸಿನಿಮಾ ೭೭೭ ಚಾರ್ಲಿ ಮತ್ತೆ ಶೂಟಿಂಗ್ ಶುರುವಾಗಿದೆ. ಈಗಾಗಲೇ ಶೇ. ೭೫ರಷ್ಟು ಶೂಟಿಂಗ್ ಮುಗಿದಿದ್ದು, ಇನ್ನೂಳಿದ ಭಾಗದ ಚಿತ್ರೀಕರಣಮಾಡಲು ಪ್ಲಾನ್ ಮಾಡಿದೆ. ಅಕ್ಟೋಬರ್ನಲ್ಲಿ ಶೂಟಿಂಗ್ ಶುರು ಮಾಡುತ್ತಿದ್ದಾರಂತೆ. ಶೇ. ೫ರಷ್ಟು ಬೆಂಗಳೂರಿನಲ್ಲಿ ಶೂಟ್ ಮಾಡಲಿದ್ದಾರಂತೆ.
ಇನ್ನುಳಿದಂತೆ ಕೊಡೆಕೆನಲ್, ಚಂಡೀಗಡ್, ಹಿಮಾಚಲದ ಶಿಮ್ಲಾ ಹಾಗೂ ಕಾಶ್ಮೀರದ ಚಿತ್ರೀಕರಣ ಮಾಡಲಿದ್ದಾರಂತೆ ನಿರ್ದೇಶಕರು. ಈ ಚಿತ್ರಕ್ಕೆ ನೋಬಿನ್ ಪೌಲ್ ಸಂಗೀತ ನೀಡಿದ್ದಾರೆ. ಇನ್ನು ಒಂದು ಮೊಟ್ಟೆಯ ಕಥೆ ಸಿನಿಮಾದ ಖ್ಯಾತಿಯ ರಾಜ್ ಬಿ ಶೆಟ್ಟಿ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳುತ್ತಿದ್ದಾರೆ. ಪುಷ್ಕರ್ ಫಿಲ್ಮಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ಬರುತ್ತಿದೆ.