ಕೇಂದ್ರ ಸರ್ಕಾರದ ಗೃಹ ಇಲಾಖೆ ಇಂದು ಅನ್ ಲಾಕ್ ೫.೦ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಚಿತ್ರಮಂದಿರಗಳು ಸೇರಿದಂತೆ ಹಲವು ಸೇವೆಗಳಿಗೆ ಅವಕಾಶ ನೀಡಿದೆ.
ಇಂದು ಹೊರಡಿಸಿರುವ ಹೊಸ ಅನ್ ಲಾಕ್ ಮಾರ್ಗಸೂಚಿ ಪ್ರಕಾರ, ಅಕ್ಟೋಬರ್ ೧೫ರಿಂದ ಚಿತ್ರಮಂದಿರಗಳನ್ನು ತೆರೆಯಬಹುದಾಗಿದೆ. ಆದರೆ ಕೆಲವು ನಿಯಮಾವಳಿಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.
ಚಿತ್ರಮಂದಿರಗಳು ಒಟ್ಟು ಆಸನ ವ್ಯವಸ್ಥೆಯ ೫೦% ಮಾತ್ರವೇ ಪ್ರೇಕ್ಷಕರಿಗೆ ಪ್ರವೇಶ ನೀಡಬೇಕೆಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಚಿತ್ರಮಂದಿರಗಳು ತೆರೆಯುವ ಮುನ್ನಾ ಸ್ಯಾನಿಟೈಸೇಶನ್ ಕಡ್ಡಾಯವಾಗಿದೆ.
ಕೊರೊನಾ ಕಾರಣಕ್ಕೆ ಮಾರ್ಚ್ ತಿಂಗಳಲ್ಲಿ ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿತ್ತು. ಆರು ತಿಂಗಳ ಬಳಿಕ ಚಿತ್ರಮಂದಿರಗಳು ಪುನರಾರಂಭ ಮಾಡಲಾಗುತ್ತಿದೆ. ಹಲವಾರು ಸಿನಿಮಾಗಳು ಬಿಡುಗಡೆಗೆ ತಯಾರಾಗಿದ್ದು, ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.