Tuesday, June 28, 2022

Latest Posts

ಅಕ್ಟೋಬರ್ 15ರಿಂದ ಚಿತ್ರಮಂದಿರ ಆರಂಭ, ಈ ವಾರ ೬ಕ್ಕೂ ಹೆಚ್ಚು ಹಿಂದಿ ಚಿತ್ರಗಳು ಮರು-ಬಿಡುಗಡೆ

ಆರೇಳು  ತಿಂಗಳಿಂದ  ಕೊರೋನಾ  ವೈರಸ್‌ನಿಂದ  ಚಿತ್ರಮಂದಿರ  ಬಂದ್  ಆಗಿತ್ತು. ಇದೀಗ ಸರ್ಕಾರ ಅನುಮತಿ  ನೀಡಿದೆ. ಅಕ್ಟೋಬರ್  ೧೫ರಿಂದ  ದೇಶಾದ್ಯಂತ  ಚಿತ್ರಮಂದಿರಗಳು  ಮತ್ತೆ  ಆರಂಭವಾಗುತ್ತದೆ.  ಆದ್ರೆ, ಯಾವುದೇ ಹೊಸ ಸಿನಿಮಾಗಳು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಇದು ಕೇವಲ ಒಂದು ಇಂಡಸ್ಟ್ರಿಯ ಕಥೆಯಲ್ಲ, ಎಲ್ಲ ಇಂಡಸ್ಟ್ರಿಯಲ್ಲೂ ಇಂತಹದ್ದೆ ಸ್ಥಿತಿ. ಜನರನ್ನು ಥಿಯೇಟರ್ ಗೆ ಆಕರ್ಷಿಸಲು ಹಳೆಯ ಚಿತ್ರಗಳನ್ನು ಮರುಬಿಡುಗಡೆ ಮಾಡಲಾಗುತ್ತಿದೆ. ಲಾಕ್ ಡೌನ್ ವೇಳೆ ಆನ್ ಲೈನ್ ನಲ್ಲಿ ರಿಲೀಸ್ ಆಗಿದ್ದ ಮತ್ತು ಲಾಕ್ ಡೌನ್ ಘೋಷಣೆಗೂ ಮುಂಚಿನ ವಾರದಲ್ಲಿ ತೆರೆಕಂಡಿದ್ದ ಚಿತ್ರಗಳು ಈಗ ಚಿತ್ರಮಂದಿರಕ್ಕೆ ಬರ್ತಿದೆ. ಸದ್ಯದ ಮಾಹಿತಿ ಪ್ರಕಾರ, ಹಿಂದಿಯಲ್ಲಿ ಆರು ಸಿನಿಮಾ ಈ ವಾರ ಮತ್ತೆ ರಿಲೀಸ್ ಆಗುತ್ತಿದೆ
ಅಕ್ಟೋರ್ಬರ್‌೧೫ ರಂದು ಅಜಯ್ ದೇವಗನ್, ಸೈಫ್ ಅಲಿ ಖಾನ್, ಕಾಜೋಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ತನ್ಹಾಜಿ ಸಿನಿಮಾ ರಿ-ರಿಲೀಸ್ ಆಗುತ್ತಿದೆ. ಇದರ ಜೊತೆಗೆ ೨೦೧೮ರಲ್ಲಿ ಶಾಂತ್ ಸಿಂಗ್ ಮತ್ತು ಸಾರಾ ಅಲಿ ಖಾನ್ ನಟಸಿಟಿದ್ದ ಕೇದರ್ ನಾಥ್ ಚಿತ್ರವೂ ಮತ್ತೆ ಚಿತ್ರಮಂದಿರಕ್ಕೆ ಬರ್ತಿದೆ. ೨೦೨೦ರ ಫೆಬ್ರವರಿ ತಿಂಗಳಲ್ಲಿ ಆಯುಷ್ಮಾನ್ ಖುರಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ’ಶುಭಮಂಗಲ್ ಜ್ಯಾಾದ ಸಾವ್ ಧಾನ್’ ಸಿನಿಮಾ ಈ ವಾರ ಮತ್ತೆ ಪ್ರೇಕ್ಷಕರೆದುರು ಬರ್ತಿದೆ. ಇದರ ಜೊತೆಗೆ ೨೦೨೦ ಫೆಬ್ರವರಿಯಲ್ಲಿ ಅನಿಲ್ ಕರ್ಪೂ, ಆದಿತ್ಯ ರಾಯ್ ಕರ್ಪೂ, ದಿಶಾ ಪಟಾನಿ ನಟಿಸಿದ್ದ ’ಮಲಾಂಗ್’ ಸಿನಿಮಾ ತೆರೆಕಾಣುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss