Thursday, August 18, 2022

Latest Posts

ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದ ಲಾರಿ ವಶ: ಚಾಲಕನ ಬಂಧನ

ಹೊಸ ದಿಗಂತ ವರದಿ, ಚಿತ್ರದುರ್ಗ:

ಅಕ್ರಮವಾಗಿ ಸಾಗಿಸುತ್ತಿದ್ದ ೫ ಲಕ್ಷ ಮೌಲ್ಯದ ಅನ್ಯಭಾಗ್ಯ ಅಕ್ಕಿ ತುಂಬಿದ ಲಾರಿಯನ್ನು ಗ್ರಾಮಾಂತರ ಠಾಣೆ ಪೋಲಿಸರು ಮಾಲು ಸಮೇತ ವಶಪಡಿಸಿಕೊಂಡಿದ್ದಾರೆ.
ಚಿತ್ರದುರ್ಗದ ಸೀಬಾರದ ಬಳಿಯ ದಾವಣಗೆರೆಯ ಅಪ್ಸಾನ ಟ್ರಾನ್ಸ್ ಪೋರ್ಟ್‌ನ ರವಿಕುಮಾರ್ ಎಂಬುವರು ಕೆಎ-೧೭-೩೦೩೬ ನಂಬರಿನ ಲಾರಿಯಲ್ಲಿ ೫ ಲಕ್ಷ ಮೌಲ್ಯದ ೧೮೦ ಕ್ವಿಂಟಾಲ್‌ನ ೩೬೦ ಚೀಲಗಳನ್ನು ತುಂಬಿಸಿ ತುಮಕೂರಿನ ಅರ್ಮಾನ್ ಎಂಟರ್ ಪ್ರೈಸಸ್‌ಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದರು.
ಅದರಂತೆ ತುಮಕೂರಿಗೆ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಕುರಿತು ಖಚಿತ ಮಾಹಿತಿ ಗ್ರಾಮಾಂತರ ಪೋಲಿಸರಿಗೆ ಸಿಕ್ಕಿದ್ದು, ಅಕ್ಕಿ ಸಾಗಿಸುತ್ತಿದ್ದ ಲಾರಿ ಹಾಗೂ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆ ಸಿಪಿಐ ಬಾಲಚಂದ್ರ ನಾಯ್ಕ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕ ಸುರೇಶ್ ಎಂಬಾತನನ್ನು ಬಂಧಿಸಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಜರಣ ದಾಖಲಿಸಿದ್ದು, ಲಾರಿ ಚಾಲಕನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!