Saturday, July 2, 2022

Latest Posts

ತಿಪ್ಪೆಗುಂಡಿಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಆರೋಪಿ ಬಂಧನ

ಮದ್ದೂರು: ಮನೆಯ ತಿಪ್ಪೆಗುಂಡಿಯಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಗಾಂಜಾ ಗಿಡವನ್ನು ವಶಪಡಿಸಿಕೊಂಡಿದ್ದಾರೆ.
ಕಬ್ಬಾರೆ ಗ್ರಾಮದ ಕೆ.ಆರ್.ಪ್ರಸನ್ನಕುಮಾರ್ ಎಂಬಾತನೇ ಗಾಂಜಾ ಗಿಡವನ್ನು ಅಕ್ರಮವಾಗಿ ಬೆಳೆದು ಸಿಕ್ಕಿಕೊಂಡ ವ್ಯಕ್ತಿ. ಡಿವೈಎಸ್ಪಿ ಪೃಥ್ವಿ ಅವರ ನೇತೃತ್ವದಲ್ಲಿ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ ಸಂದರ್ಭದಲ್ಲಿ ಮನೆಯ ಹಿಂಭಾಗದ ತಿಪ್ಪೆಗುಂಡಿಯಲ್ಲಿ ಗಾಂಜಾ ಗಿಡಗಳನ್ನು ಹಣ ಸಂಪಾದನೆ ಮಾಡುವ ಉದ್ದೇಶದಿಂದ ಬೆಳೆದಿರುವುದು ಕಂಡು ಬಂದ ಹಿನ್ನಲೆಯಲ್ಲಿ ಕೆ.ಆರ್.ಪ್ರಸನ್ನ ಮತ್ತು ಆತನು ಬೆಳೆದಿದ್ದ ಗಾಂಜಾ ಸಸಿಗಳನ್ನು ವಶಕ್ಕೆ ತೆಗೆದುಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿದ್ದಾರೆ.
ಈ ಸಂಬಂಧ ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss