Thursday, August 11, 2022

Latest Posts

ಅಕ್ರಮಿಗಳ ವಿರುದ್ಧ ಕಠಿಣ ಕ್ರಮ ಬೇಕು: ರಾಜ್ಯದಲ್ಲಿ ಗೋಹತ್ಯಾ ನಿಷೇಧ ಬಗ್ಗೆ ವಿನಯ್ ಶೆಟ್ಟಿ ಪ್ರತಿಕ್ರಿಯೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶಕ್ಕೆ ರಾಜ್ಯಪಾಲರು ಸಹಿ ಮಾಡಿದ್ದು, ಮಂಗಳವಾರ ಮಧ್ಯರಾತ್ರಿಯಿಂದಲೇ ಕಾನೂನಾಗಿ ಜಾರಿಗೆ ಬಂದಿದೆ. ಗೋವುಗಳ ಅಕ್ರಮ ಸಾಗಾಟ, ಹತ್ಯೆ ನಡೆದರೆ ಪೊಲೀಸರು ಹೊಸ ಕಾನೂನಿನ ಅನ್ವಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ, ಶಿಕ್ಷೆಗೆ ಗುರಿಪಡಿಸಬೇಕು ಎಂದು ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ವಿನಯ್ ಎಲ್. ಶೆಟ್ಟಿ ಹೇಳಿದರು.
ಗೋವುಗಳ ಅಕ್ರಮ ಸಾಗಾಟ, ಹತ್ಯೆ ತಡೆಗೆ ಯಡಿಯೂರಪ್ಪ ಸರಕಾರ ಪ್ರಬಲ ಕಾನೂನು ಜಾರಿಗೆ ತಂದಿದೆ. ಈ ಕಾನೂನನ್ನು ಮೊದಲ ಬಾರಿಗೆ ಉಲ್ಲಂಘನೆ ಮಾಡುವವರಿಗೆ ೫೦ ಸಾವಿರ ರೂ.ನಿಂದ ೫ ಲಕ್ಷ ರೂ.ವರೆಗೆ ದಂಡ, ೩ ರಿಂದ ೫ ವರ್ಷದವರೆಗೆ ಜೈಲು ಶಿಕ್ಷೆ ವಿಸಬಹುದು. ಕಾನೂನು ಉಲ್ಲಂಘನೆ ಪುನರಾವರ್ತನೆಯಾದರೆ ೫ ರಿಂದ ೧೦ ಲಕ್ಷ ರೂ.ವರೆಗೆ ದಂಡ ವಿಸಲು ಅವಕಾಶ ಇದೆ. ಅಕ್ರಮವಾಗಿ ಜಾನುವಾರು ಸಾಗಾಟ ಮಾಡುವ ವಾಹನಗಳನ್ನು ಹೊಸ ಕಾನೂನಿನ್ವಯ ಯಾವುದೇ ಕಾರಣಕ್ಕೂ ಬಿಡಿಸಲು ಸಾಧ್ಯವಿಲ್ಲ. ಗೋಹತ್ಯೆ ತಡೆಗೆ ಇದು ಉತ್ತಮ ಕಾನೂನು ಆಗಿದ್ದು, ೧೫ ದಿನಗಳಲ್ಲಿ ನಿಯಮಾವಳಿ ರೂಪಿಸಿ, ಜಾರಿಗೆ ತರಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಗೋ ರಕ್ಷಣೆಗೆ ಕಳೆದ ಹಲವಾರು ವರ್ಷಗಳಿಂದ ಅನೇಕ ಸಂಘಟನೆ, ಗೋಪ್ರೇಮಿಗಳು, ಮಠಾಶರು ಹೋರಾಟ ನಡೆಸಿದ್ದಾರೆ. ಜಾನುವಾರು ಅಕ್ರಮ ಸಾಗಾಟ ತಡೆಗೆ ಈ ಹಿಂದೆ ಕಾನೂನು ಪ್ರಬಲವಾಗಿರಲಿಲ್ಲ. ೧ ಸಾವಿರ ರೂ. ದಂಡ ಮತ್ತು ೬ ತಿಂಗಳು ಜೈಲು ಶಿಕ್ಷೆ ಇತ್ತು. ಅನೇಕರ ಹೋರಾಟದ ಬಳಿಕ ೨೦೧೦ರಲ್ಲಿ ಬಿಜೆಪಿ ಸರಕಾರ ಎರಡೂ ಸದನದಲ್ಲಿ ಹೊಸ ವಿಧೇಯಕ ಪಾಸ್ ಮಾಡಿತ್ತು. ಆದರೆ, ಅಂದಿನ ರಾಜ್ಯಪಾಲರು ಇದಕ್ಕೆ ಅಂಕಿತ ಹಾಕಿರಲಿಲ್ಲ. ಬಳಿಕ ಸಿದ್ದರಾಮಯ್ಯ ಸರಕಾರ ಈ ಮಸೂದೆಯನ್ನು ವಾಪಸ್ ಪಡೆದಿತ್ತು. ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರಕಾರ ದಿಟ್ಟತನದಿಂದ ಬಲಿಷ್ಠ ಕಾನೂನು ಜಾರಿಗೆ ತಂದಿದೆ. ಯಾವುದೇ ರಾಜಕೀಯ ಅಥವಾ ಸಮುದಾಯವನ್ನು ಗುರಿಯಾಗಿರಿಸಿ ರಾಜ್ಯ ಸರಕಾರ ಈ ಕಾನೂನು ಜಾರಿಗೊಳಿಸಿಲ್ಲ ಎಂದು ವಿವರಿಸಿದರು.
ಹೊಸ ಕಾನೂನನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತರನ್ನು ಆಗ್ರಹಿಸಲಾಗುವುದು ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರ್ ಶೆಟ್ಟಿ ಕಣ್ಣೂರು, ಜಿಲ್ಲಾ ವಕ್ತಾರರಾದ ರಾಧಾಕೃಷ್ಣ, ಜಗದೀಶ ಶೇಣವ, ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ, ರಣದೀಪ್ ಕಾಂಚನ್ ಉಪಸ್ಥಿತರಿದ್ದರು.

ಮೈಸೂರಿನಲ್ಲಿ ಮೊದಲ ಪ್ರಕರಣ
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾನೂನು ಅನ್ವಯ ಮೈಸೂರು ಜಿಲ್ಲೆಯ ಹಳ್ಳಿಯೊಂದರಲ್ಲಿ ಬುಧವಾರ ಮೊದಲ ಪ್ರಕರಣ ದಾಖಲಾಗಿದ್ದು, ೧೪ ಜಾನುವಾರು ರಕ್ಷಣೆ ಮಾಡಲಾಗಿದೆ. ಅಕ್ರಮ ಗೋಸಾಗಾಟ ನಡೆಸಿದರೆ ಅವರ ವಿರುದ್ಧ ಹೊಸ ಕಾನೂನಿನ ಅನ್ವಯ ಶಿಕ್ಷೆಗೆ ಗುರಿಪಡಿಸಬೇಕು ಎಂದು ವಿನಯ್ ಎಲ್. ಶೆಟ್ಟಿ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss