Monday, July 4, 2022

Latest Posts

ಅಕ್ರಮ ಆಸ್ತಿ ಸಂಪಾದನೆ ಆರೋಪ: ಡಿಕೆಶಿ ಕುಟುಂಬದ ಸದಸ್ಯರನ್ನು ಜೈಲಿಗೆ ಕಳಿಸಲಿ: ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ

ಧಾರವಾಡ:  ಅಕ್ರಮ ಆಸ್ತಿ ಸಂಪದಿಸಿದ ಡಿ.ಕೆ.ಶಿವಕುಮಾರ, ಡಿ.ಕೆ.ಸುರೇಶ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಭ್ರಷ್ಟಾಚಾರ ನಿಯಂತದರಣ ಕಾಯ್ದೆಯಡಿ ಎಫ್ಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ .ಐಆರ್ ದಾಖಲಿಸುವ ಜತೆಗೆ ಜೈಲಿಗೆ ಕಳಿಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಹೇಳಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಡಿ.ಕೆ.ಶಿವಕುಮಾರ ಮನೆಯ ಮೇಲಿನ ಸಿಬಿಐ ದಾಳಿ ಸ್ವಾಗತ. ಡಿಕೆಶಿ ಅಕ್ರಮ ಆಸ್ತಿಗಳ ಬಾಹು ಬಹಳ ವಿಸ್ತಾರವಿದೆ. ವಿ.ಜಿ. ಸಿದ್ಧಾರ್ಥ್ ಕಾಫಿ ಡೇ ಸೇರಿ ಇತ್ಯಾದಿ ಅಕ್ರಮದಲ್ಲಿ ಭಾಗಿ ಆಗಿದ್ದಾರೆ ಎಂದು ದೂರಿದರು.

ಡಿಕೆಶಿ ಕುಟುಂಬದ ಸದಸ್ಯರು ಆದಾಯಕ್ಕಿಂತ ಹೆಚ್ಚಿನ ಅಕ್ರಮ ಆಸ್ತಿ ಸಂಪಾದಿಸಿದ್ದು, ಸಿಬಿಐ ದಾಳಿಯಿಂದ ತಿಳಿದು ಬಂದಿದೆ. ಮುಂದೆ ಯಾರು ಇಂಥ ದುಸ್ಸಾಹಸಕ್ಕೆ ಕೈ ಹಾಕದಂತೆ ಇವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದರು.

ಡಿ.ಕೆ.ಶಿವಕುಮಾರ ಅವರ ಅಕ್ರಮ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದು ಒತ್ತಾಯಿಸಿದ್ದಾಗಿ ತಿಳಿಸಿದರು.

ಡಾ. ವೆಂಕನಗೌಡ ಪಾಟೀಲ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss