ಅಕ್ರಮ ಕಳ್ಳಭಟ್ಟಿ ಸಾರಾಯಿ ಅಡ್ಡೆಗೆ ಪೊಲೀಸ್ ದಾಳಿ

0
77

ಬಂಟ್ವಾಳ: ಇಲ್ಲಿಗೆ ಸಮೀಪದ ಜಕ್ರಿಬೆಟ್ಟು ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಕಳ್ಳಬಟ್ಟಿ ತಯಾರಿಯ ಘಟಕಕ್ಕೆ ಮಂಗಳವಾರ ಅಪರಾಧ ಪತ್ತೆ ದಳದ ಪೊಲೀಸರು ದಾಳಿ ನಡೆಸಿದ್ದು,ಈ ಸಂಬಂಧ  ಇಬ್ಬರನ್ನು ಬಂಧಿಸಿದ್ದಾರೆ.    ಅಗ್ರಾರ್ ಕೊಡಿ ನಿವಾಸಿಗಳಾದ ಅಲ್ಸರ್ ಪಿಂಟೋ ಮತ್ತು ರೋಶನ್  ಫೆರ್ನಾಂಡಿಸ್ ಬಂಧಿತ ಆರೋಪಿಗಳು. ಆಗ್ರಾರ್ ಕೋಡಿಯ ಮನೆಯೊಂದರಲ್ಲಿ ಅಕ್ರಮ ಕಳ್ಳಭಟ್ಟಿ ತಯಾರಿಸುವ ಬಗ್ಗೆ  ಖಚಿತ ಮಾಹಿತಿಯ ಮೇರೆಗೆ  ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ನೇತೃತ್ವದಲ್ಲಿ  ಅಪರಾಧ ಪತ್ತೆದಳ  ಪಿ ಎಸ್ ಐ ಕುಮಾರ್ ಕಾಂಬ್ಳೆ,   ಹಾಗೂ ನಗರ ಠಾಣಾ ಎಸ್.ಐ.ಅವಿನಾಶ್, ಗ್ರಾಮಾಂತರ ಠಾಣಾ   ಎಸ್. ಐ. ಪ್ರಸನ್ನ ಮತ್ತವರ ಸಿಬ್ಬಂದಿಗಳು ಈ ದಾಳಿ ಕಾರ್ಯಾಚರಣೆ ನಡೆಸಿದ್ದಾರೆ.  ಕಳ್ಳಬಟ್ಟಿ  ತಯಾರಿಸಲು ಬಳಸಿರುವ ಸಾಮಾಗ್ರಿಗಳು,  ಸ್ಕೂಟರ್ ಸಹಿತ  20 ಲೀಟರ್ ಕಳ್ಳಬಟ್ಟಿ ಸಾರಾಯಿಯನ್ನು ವಶ ಪಡಿಸಿಕೊಂಡಿದ್ದಾರೆ.   ಪ್ರಕರಣವನ್ನು ಬಂಟ್ವಾಳ ನಗರ ಠಾಣೆಗೆ ಹಸ್ತಾಂತರಿಸಲಾಗಿದೆ.ಈ ಬಗ್ಗೆ ಕೇಸ್ ದಾಖಲಾಗಿದ್ದು,ಮುಂದಿನ ತನಿಖೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here