Saturday, August 13, 2022

Latest Posts

ಅಕ್ರಮ ಚಿನ್ನ ಸಾಗಣೆ ಶಂಕೆ: ಡಿಆರ್‌ಐ ನಿಂದ ಕ್ರಿಕೆಟಿಗ ಕೃನಾಲ್ ಪಾಂಡ್ಯ ವಿಚಾರಣೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಯುಎಇನಲ್ಲಿ ಐಪಿಎಲ್​ ಪಂದ್ಯ ಮುಕ್ತಾಯದ ಬಳಿಕ ಮುಂಬೈಗೆ ಮರಳಿದ್ದ ಕೃನಾಲ್ ಅವರನ್ನು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ವಿಚಾರಣೆಗೊಳಪಡಿಸಿದೆ.
ಯುಎಇನಲ್ಲಿಮುಂಬೈಗೆ ಮರಳಿದ್ದ ಕೃನಾಲ್, ಅಕ್ರಮವಾಗಿ ಚಿನ್ನ ಸೇರಿದಂತೆ ಇತರ ಬೆಲೆ ಬಾಳುವ ವಸ್ತುಗಳನ್ನು ತಂದಿದ್ದಾರೆ ಎಂಬ ಶಂಕೆ ಮೇಲೆ ಡಿಆರ್‌ಐ ವಿಚಾರಣೆ ನಡೆಸುತ್ತಿದ್ದು, ಗುಪ್ತಚರ ಇಲಾಖೆ ಅಧಿಕಾರಿಗಳು ಕೃನಾಲ್ ಬಳಿಯಿಂದ ಅನುಮತಿಗಿಂತ ಹೆಚ್ಚಾಗಿ ಸಾಗಿಸುತ್ತಿದ್ದ ಚಿನ್ನ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಚಿನ್ನ ಸಾಗಾಟಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆ ಪತ್ರ ತೋರಿಸುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss