ಸೋಮವಾರಪೇಟೆ: ಅಕ್ರಮವಾಗಿ ಜಾನುವಾರುಗಳ ಸಾಗಾಟಕ್ಕೆ ಯತ್ನಿಸಿದ ಆರೋಪಿಯನ್ನು ಸೊಮವಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ಹೆಬ್ಬಾಲೆ ಗ್ರಾಮದ ದೇವರಾಜು ಬಂಧಿತ ಆರೋಪಿ. ಹಟ್ಟಿಹೊಳೆಯಿಂದ ಸೋಮವಾರಪೇಟೆ ಕಡೆಗೆ ಕೆ.ಎ 12-5284 ಪಿಕ್ಅಪ್ನಲ್ಲಿ ಸಾಗಾಟ ಮಾಡುವ ಸಂದರ್ಭ ಐಗೂರು ಸಮೀಪ ಸಿಪಿಐ ನಂಜುಂಡೇಗೌಡ ಹಾಗೂ ಸಿಬ್ಬಂದಿಗಳು ವಾಹನ ಮತ್ತು ಜಾನುವಾರುಗಳನ್ನು ವಶಕ್ಕೆ ಪಡೆದು, ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಅಕ್ರಮ ಮರಳು ಸಾಗಾಟ: ಅಕ್ರಮ ಮರಳು ಸಾಗಿಸುತ್ತಿದ್ದ ವಾಹನ ಮತ್ತು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾದಾಪುರ ಗ್ರಾಮದ ಮಧು ಆರೋಪಿ. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಶಿವಶಂಕರ್ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗೆ 16 ಸಾವಿರ ರೂ. ದಂಡ ವಿಧಿಸಿ, ಪ್ರಕರಣವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಿದ್ದಾರೆ.