Wednesday, August 10, 2022

Latest Posts

ಅಕ್ಷರಗಳಷ್ಟೇ ಅಲ್ಲ, ಧ್ವನಿಯಿಂದಲೂ ಬೆಚ್ಚಿ ಬೀಳಿಸಿದ್ರು ಬೆಳಗೆರೆ!

ಹೊಸದಿಗಂತ ಆನ್‌ಲೈನ್ ಡೆಸ್ಕ್:
ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ರವಿ ಉದಯಿಸಿದ್ದು ಹೀಗೆ..
ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದ ವಿಭಾಗದ್ಲಿ ಸ್ನಾತಕೋತ್ತರ ಪದವಿ ಪಡೆದ ರವಿ ಬೆಳಗೆರೆ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಅಕ್ಷರದಲ್ಲಿ ತೊಡಗಿಸಿಕೊಂಡಿದ್ದು ಅಭಿಮಾನ ಪತ್ರಿಕೆಯಿಂದ.
ನಂತರ ಹಾಯ್ ಬೆಂಗಳೂರು,ಓಮನಸೆ ಪಾಕ್ಷಿಕ ಪತ್ರಿಕೆಯಿಂದ ಜನರ ಮನೆ ಮಾತಾದರು. ಅಕ್ಷರಗಳಲ್ಲಿ ತಮ್ಮ ಭಾವನೆಗಳನ್ನು ಸ್ಪಷ್ವಾಗಿ ಜನರ ಮನಸ್ಸಿಗೇ ನಟ್ಟಿದ್ದು ರವಿ ಬೆಳಗೆರೆ.
ಪತ್ರಿಕೆಗಳ ಜೊತೆಗೆ ಕ್ರೈಂ ಡೈರಿ, ಕನ್ನಡ ಸಾಹಿತ್ಯ, ಚಿತ್ರಕಥೆಯಲ್ಲಿ ಕೂಡ ಇವರ ಹೆಸರಿದೆ.ಕೆಲ ಸಮಯದವರೆಗೆ ರಾತ್ರಿ ಕ್ರೈಂ ಡೈರಿಯಲ್ಲಿ ರವಿ ಬೆಳಗೆರೆ ಅವರ ಧ್ವನಿ ಕೇಳದೆ ಜನ ಮಲಗುತ್ತಿರಲಿಲ್ಲ.
ಹಲವಾರು ಪುಸ್ತಕಗಳ ಬರೆದು ಹಾಗೇ ಭಾಷಾಂತರ ಕೂಡ ಮಾಡಿರುವ ಬೆಳಗೆರೆ ಅವರು ಭಾವನಾ ಪ್ರಕಾಶನ, ಭಾವನಾ ಆಡಿಯೋ ರೀಚ್ ಮತ್ತು ಪ್ರಾರ್ಥನಾ ಶಾಲೆಯ ಸಂಸ್ಥಾಪಕರು ಹೌದು. ರವಿ ಬೆಳಗೆರೆ ಅವರ ಬಾಟಮ್ ಐಟಮ್, ಖಾಸ್ ಬಾತ್ ಅಂಕಣಗಳು ಎಂದೆಂದಿಗೂ ಜನಪ್ರಿಯ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss