ಹೊಸದಿಗಂತ ಆನ್ಲೈನ್ ಡೆಸ್ಕ್:
ಬರವಣಿಗೆ ಮೂಲಕ ಜನರ ಮನ ಹೊಕ್ಕ ಅಕ್ಷರ ಮಾಂತ್ರಿಕ ರವಿ ಬೆಳಗೆರೆ(62) ಇಂದು ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ತಡರಾತ್ರಿ ಹೃದಯಾಘಾತವಾಗಿದ್ದು,ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ರವಿ ಬೆಳಗೆರೆ ಮೃತಪಟ್ಟಿದ್ದಾರೆ.
ಇಂದು ಬೆಳಗ್ಗೆಯಿಂದ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ. 4 ಗಂಟೆಯೊಳಗೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಹಾಯ್ ಬೆಂಗಳೂರು,ಕ್ರೈಂ ಡೈರಿ,ಓ ಮನಸೇ,ಪ್ರಾರ್ಥನಾ ಶಿಕ್ಷಣ ಸಂಸ್ಥೆ ಹೀಗೆ ರವಿ ಬೆಳಗೆರೆ ಮನೆ ಮಾತು.
ಹೇಳಿ ಹೋಗು ಕಾರಣ,ನೀ ಹಿಂಗ ನೋಡಬ್ಯಾಡ ನನ್ನ, ಮಾಂಡೋವಿ,ಮಾಟಗಾತಿ, ಸರ್ಪಸಂಬಂಧ ಕಾದಂಬರಿಗಳ ಮೂಲಕ ಪ್ರತಿ ಮನೆ ಪ್ರವೇಶಿಸಿದ್ದ ರವಿ ಬೆಳಗೆರೆ ಇನ್ನು ನೆನಪು ಮಾತ್ರ.