Monday, July 4, 2022

Latest Posts

ಅಖಂಡ ಶ್ರೀನಿವಾಸಮೂರ್ತಿಗೆ ರಾಜಕೀಯ ಒತ್ತಡ ಹೆಚ್ಚಾಗಿರಬಹುದು: ಸಚಿವ ಜೆ.ಸಿ.ಮಾಧುಸ್ವಾಮಿ

ತುಮಕೂರು: ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಘಟನೆಯಲ್ಲಿ ತಮ್ಮ ಮನೆಯ ಮೇಲೆ ದಾಳಿ ನಡೆದು ಅಪಾರ ಹಾನಿಯಾದರೂ ಸಹ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ದೂರು ನೀಡದಿರಲು ಅವರ ಪಕ್ಷದ ನಾಯಕರ ಒತ್ತಡ ಇರಬಹುದು ಆದರೆ ಪೊಲೀಸ್ ಇಲಾಖೆಯು ಸ್ವಯಂ ಪ್ರೇರಿತವಾದ ದೂರು ದಾಖಲಿಸುತ್ತದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ತುಮಕೂರಿನಲ್ಲಿಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಶಾಸಕರು ತಮ್ಮ ಮನೆಯ ಮೇಲೆ ದಾಳಿ ನಡೆಸಿದವರ ಬಗ್ಗೆ ಈ ವೇಳೆಗೆ ದೂರು ನೀಡಬೇಕಿತ್ತು ಆದರೆ ಅವರಿಗೆ ಯಾರ ಒತ್ತಡ ಇದೆಯೋ ಗೊತ್ತಿಲ್ಲ, ಅವರಿಗೆ ತಮ್ಮ ಕುಟುಂಬದ ರಕ್ಷಣೆ ಗಿಂತ ರಾಜಕೀಯ ಒತ್ತಡ ಹೆಚ್ಚಾಗಿರಬಹುದು ಆದರೆ ಸರ್ಕಾರ ಸುಮ್ಮನಿರಲಾಗದು. ಆದ್ದರಿಂದ ಸುವೋ ಮೋಟೊರ್ಸ್ ದೂರು ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಖಚಿತ ಎಂದು.
2001ರಲ್ಲಿ ಒಂದು ಕಾಯ್ದೆ ಮಾಡಲಾಗಿದೆ ಅದರ ಪ್ರಕಾರ ಇಂತಹ ಗಲಭೆಗಳ ಸಂದರ್ಭದಲ್ಲಿ ಗಲಭೆಯಿಂದ ಉಂಟಾಗುವ ಸಾರ್ವಜನಿಕ ಆಸ್ತಿ ನಷ್ಟ ಮತ್ತು ಪ್ರಾಣ ಹಾನಿಯಾದರೂ ಅನ್ನವನ್ನು ಗಲಭೆ ಮಾಡಿದವರಿಂದ,ಮಾಡಿಹಿದವರಿಂದ ಮತ್ತು ಪ್ರಚೋಧನೆ ಮಾಡಿದ ರಿಂದ ವಸೂಲು ಮಾಡಲು ಅವಕಾಶವಿದೇ ಎಂದರು. ಆಗಸ್ಟ್ 20ರಂದು ಸಚಿವ ಸಂಪುಟದಲ್ಲಿ ಸಭೆಯಿದ್ದು ಆಸಭೆಯಲ್ಲಿ ಈ ಘಟನೆಯಲ್ಲಿ ಈ ಕಾಯಿಲೆಯಿಂದ ಬಳಕೆಯ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು.
ಜಮೀರ್ ಅಹಮದ್ ಅವರು ನನ್ನ ಉತ್ತಮ ಗೆಳೆಯರು ಆದರೆ ರಾಜಕೀಯವಾಗಿ ಅವರು ಬೆಳೆದು ಬಂದ ದಾರಿಗೂ ನಾನು ಬೆಳೆದು ಬಂದ ದಾರಿಗೂ ಬಹಳ ವ್ಯತ್ಯಾಸವಿದೆ ಎಂದ ಸಚಿವರು ನಾವು ಜನರ ನಡುವಿನಿಂದ ಬೆಳೆದುಬಂದವರು ಎಂದರು.
2001 ರ ಕಾಯ್ದೆಯಂತೆ ಈ ದುರ್ಘಟನೆಗೇ ಕಾರಣರಾದರು,ಪ್ರಚೋಧನೆ ಮಾಡಿದವರು,ಹಿಂದೆ ಇದ್ದವರು ಎಲ್ಲರ ವಿರುದ್ಧವೂ ಕಾನೂನು ಕ್ರಮ ಖಚಿತ ಎಂದರಲ್ಲದೆ ಕಾನೂನು ಹಿಡಿತದಿಂದ ಯಾರೂ ಸಹ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಪೊಲೀಸ್ ತನಿಖೆಯಿಂದ ಮಾತ್ರ ಈ ಘಟನೆಗೆ ಕಾರಣರಾರು ಎಂಬುದು ತಿಳಿದು ಬರಲು ಸಾಧ್ಯ ಎಂದ ಸಚಿವರು. ಈ ಸಂದರ್ಭದಲ್ಲಿ ಇಂತಹುದೇ ಕಾರಣರಾರು ಎಂದು ಹೇಳಲಾಗದು ಎಂದರು.
ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂಬುದು ಸರಿಯಾದುದಲ್ಲ.ನಮ್ಮ ಪೊಲೀಸರು ಉತ್ತಮ ತನಿಖೆ ನಡೆಸಬಲ್ಲರು ಎಂದರು.ನ್ಯಾಯಾಂಗ ತನಿಖೆಗೆ ಒತ್ತಾಯ ಮಾಡುವವರು ಈಗಿರುವ ಪೊಲೀಸರು ಅವರ ಅಧಿಕಾರದ ಅವಧಿಯಲ್ಲಿಯೂ ಇದ್ದವರೇ ಎಂಬ ಬಗ್ಗೆ ಅವರು ಚಿಂತಿಸಬೇಕು ಎಂದರು.
ಅಲ್ಲಿ ನಡೆದರುವುದು ಅಪರಾಧ. ಅಪರಾಧ ತನಿಖೆಯಿಂದ ನಡೆಸಬೇಕಾದವರು ಪೊಲೀಸರು ಎಂಬ ಸಾಮಾನ್ಯ ಜ್ಞಾನ ನ್ಯಾಯಾಂಗ ತನಿಖೆಗೆ ಒತ್ತಾಯ ಮಾಡುವವರಿಗೆ ಇರಬೇಕು ಎಂದರು.
ನೆರೆ ಪರಿಹಾರ: ನೆರೆ ಪರಿಹಾರದ ಬಗ್ಗೆ ಇದುವರೆಗೆ ಅಧಿಕೃತವಾಗಿ ಕೇಂದ್ರ ಸರ್ಕಾರ ವನ್ನು ಒತ್ತಾಯ ಮಾಡಿಲ್ಲ ಎಂದ ಸಚಿವರು. ಆದರೇ ಸುಮಾರು ನಾಲ್ಕು ಸಾವಿರಕೋಟಿ ನಷ್ಟದ ಅಂದಾಜು ಮಾಡಲಾಗಿದೆ ಎಂದರು.ಆದರೆ ಕೇಂದ್ರ ಸರ್ಕಾರ ಎನ್. ಡಿ.ಆರ್ .ಎಫ಼್ ನಿಯಮಗಳನ್ನು ಅನುಸರಿಸುತ್ತದೇ.ಅದರಂತೆ ಪರಿಹಾರ ಕೊಟ್ಟರೆ ಕಡಿಮೆ ಆಗೈತ್ತದೆ ಎಂದರು. ನಾವು.ಸುಮಾರು 36ಸಾವಿರ ಕೋಟಿಯಷ್ಟು ನಷ್ಟ ಸಂಭವಿಸಿರುವುದಾಗಿ ಅಂದಾಜು ಮಾಡಿರುವುದಾಗಿ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss