Wednesday, June 29, 2022

Latest Posts

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷರಾಗಿ ಚಾನಾಳ್ ಶೇಖರ್ ಆಯ್ಕೆ

ಹೊಸ ದಿಗಂತ ವರದಿ ಬಳ್ಳಾರಿ:

ತೀವ್ರ ಪೈಪೋಟಿ ಮಧ್ಯೆ ಭಾನುವಾರ ನಡೆದ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಸಮೀತಿ ಚುನಾವಣೆ ಎಣಿಕೆ ಕಾರ್ಯ ನಗರದ ಅಲ್ಲಂ ಸುಮಂಗಳಮ್ಮ ಕಾಲೇಜಿನಲ್ಲಿ ನಡೆದಿದ್ದು, ಸೋಮವಾರ ಬೆಳಗಿನ ಜಾವ ಮುಕ್ತಾಯಗೊಂಡಿದೆ.

ಹಾನಗಲ್ ಕುಮಾರಸ್ವಾಮಿ ವೃಂದದಿಂದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಚಾನಾಳ್ ಶೇಖರ್ ಹಾಗೂ ಅವರ ನೇತೃತ್ವದ ತಂಡ ದಾಖಲೆ ಗೆಲುವು ಸಾಧಿಸಿದೆ.

ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಚಾನಾಳ್ ಶೇಖರ್ ಹಾಗೂ ತಂಡದ ಸದಸ್ಯರು ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಮತ ಎಣಿಕೆ ಬಳಿಕ ಅಧಿಕೃತವಾಗಿ ಘೋಷಿಸಿದರು. ಫಲಿತಾಂಶ ಹೊರ‌ಬೀಳುತ್ತಿದ್ದಂತೆ ಚಾನಾಳ್ ಶೇಖರ್ ಅವರ ತಂಡದ ಸದಸ್ಯರು, ಅಭಿಮಾನಿಗಳು, ಬೆಂಬಲಿಗರು ಸಿಹಿ ಹಂಚಿ ಕುಣಿದು‌ ಕುಪ್ಪಳಿಸಿ ವಿಜಯೋತ್ಸವ ಆಚರಿಸಿದರು.

ಭಾನುವಾರ ಸಂಜೆ 4.30ರಿಂದ ಪ್ರಾರಂಭವಾದ ನತ ಎಣಿಕೆ ಕಾರ್ಯ ಸೋಮವಾರ ಬೆಳಗಿನ ಜಾವದವರೆಗೂ ನಡೆಯಿತು. ಎರಡೂ ತಂಡದ ಸದಸ್ಯರು ಉತ್ಸಾಹ, ಕುತೂಹಲದಿಂದ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು. ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್ ಹಾಗೂ ಅವರ ತಂಡದ 10 ಮಹಿಳಾ ಅಭ್ಯರ್ಥಿಗಳು ಹಾಗೂ 20 ಪುರುಷ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ಚುನಾವಣೆ ಅಧಿಕಾರಿ ಲಿಂಗನಗೌಡ ಅವರು ಘೋಷಿಸಿದರು.

ನಂತರ ನೂತನವಾಗಿ ಆಯ್ಕೆಯಾದ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್ ಅವರು ಮಾತನಾಡಿ, ಜಿಲ್ಲೆಯಾದ್ಯಂತ ಮತದಾನ ಮಾಡಿದ ಪ್ರತಿಯೋಬ್ಬರಿಗೂ ನಾನು ಹಾಗೂ ನಮ್ಮ ತಂಡದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುವೆ. ನಮ್ಮ ತಂಡದ ಮೇಲೆ‌ ಸಾಕಷ್ಟು ನಿರೀಕ್ಷೆ ಇಟ್ಟು ನಮ್ಮೆಲ್ಲರನ್ನು ಚುನಾಯಿಸಿದ ಪ್ರತಿಯೋಬ್ಬ ಮತದಾರರ ನಿರೀಕ್ಷೆಯಂತೆ ಅವಧಿಯಲ್ಲಿ ಕೆಲಸ‌ ನಿರ್ವಹಿಸುವೆ, ಇದು ಭರವಸೆಯಲ್ಲ, ಖಂಡಿತ ನುಡಿದಂತೆ ನಡೆಯುವೆ.

ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಅಭಿಮಾನ ಇದೇ ರೀತಿ ಇರಲಿ, ಚುನಾವಣೆಯಲ್ಲಿ ‌ಬೆಂಬಲಿಸಿದ, ಶ್ರಮಿಸಿದ ಪ್ರತಿಯೋಬ್ಬರಿಗೂ ಅಭಿನಂದನೆಗಳನ್ನು ಸಲ್ಲಿಸುವೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ದರೂರು‌ ಪುರುಷೋತ್ತಮ ಗೌಡ ಸೇರಿದಂತೆ ಗೆಲುವು ಸಾಧಿಸಿದ ತಂಡದವರು ಇತರರು ಉಪಸ್ಥಿತರಿದ್ದರು. ನಂತರ ಒಬ್ಬರಿಗೋಬ್ಬರು ಸಿಹಿ ಹಂಚಿ ಸಂಭ್ರಮಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss