ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅಖಿಲ ಭಾರತ ವೀರಶೈವ ಮಹಾಸಭಾದ ಸಮುದಾಯ ಭವನಕ್ಕೆ ಚರಂಡಿ ನೀರು ನುಗ್ಗದಂತೆ ಕ್ರಮ ವಹಿಸಿ: ಶಿವಕುಮಾರ ಉದಾಸಿ

ಹಾವೇರಿ: ಅಖಿಲ ಭಾರತ ವೀರಶೈವ ಮಹಾಸಭಾದ ಸಮುದಾಯ ಭವನದ ನೆಲ ಮಹಡಿಗೆ ಚರಂಡಿ ನೀರು ನುಗ್ಗುವುದನ್ನು ತಪ್ಪಿಸುವುದಕ್ಕೆ ಸೂಕ್ತ ಕ್ರಮ ವಹಿಸುವಂತೆ ಸಂಸದ ಶಿವಕುಮಾರ ಉದಾಸಿ ಅಧಿಕಾರಿಗಳಿಗೆ ಸೂಚಿಸಿದರು.
ಶನಿವಾರ ನಗರದ ದಾನೇಶ್ವರಿ ಬಡಾವಣೆಯಲ್ಲಿ ನಿರ್ಮಾಣವಾಗುತ್ತಿರುವ ಅಖಿಲ ಭಾರತ ವೀರಶೈವ ಮಹಾಸಭಾದ ಸಮುದಾಯ ಭವನಕ್ಕೆ ಭೇಟಿ ನೀಡಿ ಇತ್ತೀಚೆಗೆ ಆದ ಮಳೆಯಿಂದ ತುಂಬಿ ಹರಿದ ಚರಂಡಿಗಳ ನೀರಿನಿಂದ ಅ.ಭಾ.ವೀ.ಮ ಸಮುದಾಯ ಭವನದ ನೆಲ ಮಹಡಿಗೆ ನೀರು ನುಗ್ಗಿದ್ದರಿಂದ ನೆಲಮಹಡಿ ಸಂಪೂರ್ಣವಾಗಿ ಜಲಾವೃತವಾಗಿರುವುದನ್ನು ವೀಕ್ಷಿಸಿದರು.
ಸಮುದಾಯ ಭವನಕ್ಕೆ ನೀರು ನುಗ್ಗುವುದಕ್ಕೆ ಕಾರಣವದ ಚರಂಡಿ ನೀರು ಅದು ಹೋಗುವ ಮಾರ್ಗದ ಚರಂಡಿಗಳನ್ನು ತಾತ್ಕಾಲಿಗವಾಗಿ ಸ್ವಚ್ಛಗೊಳಿಸುವುದು ಮತ್ತು ಆ ಚರಂಡಿಗಳನ್ನು ಅಗಲಗೊಲಿಸುವುದಕ್ಕೆ ನೂತನ ಅಂದಾಜು ಪ್ರತಿ ಮಾಡುವಂತೆ ನಗರಸಭೆ ಮತ್ತು ನಗರ ಯೋಜನಾಧಿಕಾರಿಗಳಿಗೆ ಸೂಚಿಸಿದರು.
ದೊಡ್ಡ ಚರಂಡಿಗಳ ನಿರ್ಮಣಕ್ಕೆ ಬೇಕಾದ ಅನುದಾನವನ್ನು ಮಂಜೂರಾತಿ ಕೊಡಿಸಲಾಗುವುದು ಆದಷ್ಟು ಬೇಗ ಅಂದಾಜು ಪ್ರತಿಯನ್ನು ತಯಾರಿಸುವಂತೆ ಧಿಕಾರಿಗಳಿಗೆ ಶಿವಕುಮಾರ ಉದಾಸಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಭಾರತ ವೀರಶೈವ ಮಹಾಸಭಾದ ಖಜಾಂಚಿ ಶಿವಬಸಪ್ಪ ಟೊಂಕದ, ಈ ವರ್ಷ ಮಳೆಗಾಲ ಅಚಿತಿಮ ಘಟ್ಟಕ್ಕೆ ಬಂದಿದ್ದು ಇನ್ನು ಮುಂದೆ ದೊಡ್ಡ ಮಳೆಗಳಾಗುವ ಸಾಧ್ಯತೆ ಕಡಿಮೆ ಇದ್ದು ಬರುವ ವರ್ಷದ ಮಳೆಗಾಲ ಆರಂಭವಾಗುವುದರ ಒಳಗಾಗಿ ದೊಡ್ಡ ಚರಂಡಿಗಳನ್ನು ನಿರ್ಮಿಸಿ ಬರುವ ದಿನಗಳಲ್ಲಿ ಚರಂಡಿ ನೀರು ಸಮುದಾಯ ಭವನದ ಒಳಗೆ ನುಗ್ಗದಂತೆ ಕ್ರಮಗಳನ್ನು ಕೈಗೊಂಡರೆ ಒಳ್ಳೆಯದು ಎಂದರು.
ಈ ಸಂದರ್ಭದಲ್ಲಿ ಎಂ.ಎಸ್.ಕೋರಿಶೆಟ್ಟರ, ಮೃತ್ಯುಂಜಯ ಬುಕ್ಕಶೆಟ್ಟರ, ಪಿ.ಎ.ಮರಗೂರ, ವೀರಣ್ಣ ಹರನಗಿರಿ ಸೇರಿದಂತೆ ಇತರರಿದ್ರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss