ಹೊಸದಿಗಂತ ಆನ್ಲೈನ್ ಡೆಸ್ಕ್:
ಅನಗತ್ಯವಾಗಿ ಶಸ್ತ್ರಚಿಕಿತ್ಸೆ ಮಾಡುತ್ತಿದ್ದ ವರ್ಜಿನಿಯಾದ ವೈದ್ಯನಿಗೆ ಕೋರ್ಟ್ ಬರೋಬ್ಬರಿ 465 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಅಮೆರಿಕಾದ ವರ್ಜಿನಿಯಾದ ವೈದ್ಯ ಡಾ.ಜಾವೇದ್ ಪರ್ವೇಜ್ ಮಹಿಳೆಯರಿಗೆ ಬೆದರಿಸಿ ಶಸತ್ರಚಿಕಿತ್ಸೆ ಮಾಡುತ್ತಿದ್ದು, ಇದರಲ್ಲಿ ಗರ್ಭಿಣಿಯರೂ ಇದ್ದಾರೆ.
ಖಾಸಗಿ ಹಾಗೂ ಸರ್ಕಾರಿ ವಿಮೆ ಕಂಪನಿಗಳಲ್ಲಿ ಕೋಟ್ಯಂತರ ರೂ. ಬಿಲ್ ತೋರಿಸಿ ಹಣ ಪಡೆಯುತ್ತಿದ್ದ. ತನ್ನ ಗಳಿಕೆಗಾಗಿ ಅನಾವಶ್ಯಕವಾಗಿ ಗರ್ಭಿಣಿಯರಿಗೆ ಶಸ್ತ್ರಚಿಕಿತ್ಸೆ ಮಾಡುತ್ತಿದ್ದ. ಗರ್ಭಿಣಿಯರಿಗೆ ಸಾಮಾನ್ಯ ಹೆರಿಗೆಗೆ ಕಾಯದೇ ಆಪರೆಶನ್ ಮಾಡಲೇಬೇಕು ಎಂದು ಹೇಳಿ ಆಪರೇಟ್ ಮಾಡುತ್ತಿದ್ದ. ನಾರ್ಮಲ್ ಡೆಲಿವರಿ ಮಾಡಿದರೆ ಕ್ಯಾನ್ಸರ್ ಬರುವ ಸಾಧ್ಯೆತ ಹೆಚ್ಚಿದೆ ಹಾಗಾಗಿ ಆಪರೇಶನ್ ಅವಶ್ಯ ಎಂದು ಹೇಳಿ ಜನರನ್ನು ಮೋಸ ಮಾಡಿದ್ದಾನೆ. ಈತನ ಕೆಲಸದಿಂದ ವಿಮೆ ಕಂಪನಿಗಳಿಗೆ ಸಾಕಷ್ಟು ನಷ್ಟವಾಗಿದೆ ಎಂದು ಕೋರ್ಟ್ ಮುಂದೆ ಹೇಳಿದ್ದು, ವೈದ್ಯನ ತಪ್ಪು ಸಾಬೀತಾಗಿ 465 ವರ್ಷಗಳ ಜೈಲು ವಾಸ ವಿಧಿಸಿದೆ. ಅನಾವಶ್ಯ ಶಸ್ತ್ರಚಿಕಿತ್ಸೆಗೆ ಒಳಗಾದ 17 ಮಹಿಳೆಯರು ಕೋರ್ಟ್ನಲ್ಲಿ ಸಾಕ್ಷಿ ಹೇಳಿದ್ದಾರೆ.