Wednesday, August 17, 2022

Latest Posts

ಅಗಲಿದ ನಾಯಕ ಸುರೇಶ ಅಂಗಡಿಗೆ ಬಾಗಲಕೋಟೆ ಬಿಜೆಪಿಯಿಂದ ನುಡಿನಮನ

ಬಾಗಲಕೋಟೆ: ಬಿಜೆಪಿ ಪಕ್ಷದ ಹಿರಿಯ ನಾಯಕ, ಕೇಂದ್ರ ರೈಲ್ವೆ ರಾಜ್ಯ ಖಾತೆಯ ಸಚಿವ ಹಾಗೂ ಬೆಳಗಾವಿ ಸಂಸದ ಸುರೇಶ ಅಂಗಡಿಯವರ ನಿಧನಕ್ಕೆ ನಗರದ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಘಟಕದಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸುರೇಶ ಅಂಗಡಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನುಡಿನಮನವನ್ನು ಬಿಜೆಪಿ ಕಾರ್ಯಕರ್ತರು,ಮುಖಂಡರು, ಪದಾಧಿಕಾರಿಗಳು, ಅಭಿಮಾನಿಗಳು ಸಲ್ಲಿಸಿದರು.

ಮಾಜಿ ಶಾಸಕ ಪಿ.ಎಚ್.ಪೂಜಾರ ನುಡಿನಮನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಸುರೇಶ ಅಂಗಡಿಯವರ ನಿಧನ ಸುದ್ದಿಯನ್ನು ಕೇಳಿ ತುಂಬಾ ದು:ಖ ತಂದಿದೆ. ಅಂಗಡಿಯವರು ಎಲ್ಲರೊಂದಿಗೆ ಆತ್ಮೀಯವಾರಿ ಬೆರೆಯುತ್ತಿದ್ದರು ಎಂದರು.

ಸತತವಾಗಿ ನಾಲ್ಕು ಬಾರಿ ಬೆಳಗಾವಿಯಿಂದ ಸಂಸದರಾಗಿ ಆಯ್ಕೆಯಾಗುವ ಮೂಲಕ ಜನಮೆಚ್ಚುಗೆ ನಾಯಕ ಎನಿಸಿಕೊಂಡಿದ್ದರು. ಸಂಸದರಾಗಿದ್ದರೂ ಕೂಡ ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೆ, ಮುಖಂಡರಿಗೆ ಗೌರವ ಕೊಡುವುದನ್ನು ಮರೆಯುತ್ತಿರಲಿಲ್ಲ. ಅಂತಹ ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದರು ಅವರು ನಿಧನ ನಮಗೆ ತುಂಬಾ ದು:ಖ ತಂದಿದೆ ಎಂದರು.

ಸುರೇಶ ಅಂಗಡಿಯವರು ರೈಲ್ವೆ ಖಾತೆ ಸಚಿವರಾದ ಬಳಿಕ ರಾಜ್ಯದ ಪ್ರತಿಯೊಂದು ಕಡೆ ಸುತ್ತಾಡಿ ಅಲ್ಲಿ ಆಗಬೇಕಾದ ಮೂಲಭೂತ ಸೌಲಭ್ಯಗಳ ಕುರಿತು ಅಧ್ಯಯನ ನಡೆಸಿ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಾ ಸದಾ ಕ್ರೀಯಾಶೀಲ ಸಚಿವರಾಗಿ ಕೇಂದ್ರದಲ್ಲಿ ಎಲ್ಲರ ಮನಸ್ಸು ಗೆಲ್ಲುವಂತಹ ನಾಯಕರಾಗಿದ್ದರು ಆದರೆ ಅವರು ಇವತ್ತು ನಮ್ಮನ್ನು ಬಿಟ್ಟು ಹೋಗಿದ್ದಾರೆ.ಅವರ ಕುಟುಂಬಕ್ಕೆ ಆ ಭಗವಂತ ದು:ಖವನ್ನು ಸಹಿಸಿಕೊಳ್ಳುವಂತಹ ಶಕ್ತಿಯನ್ನು ನೀಡಲಿ ಎಂದು ಕೇಳಿಕೊಂಡರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ಬಿಜೆಪಿ ಹಿರಿಯನಾಯಕ ಹಾಗೂ ಕೇಂದ್ರ ರೈಲ್ವೆ ಖಾತೆ ಸಚಿವ ಸುರೇಶ ಅಂಗಡಿಯವರ ನಿಧನ ಆಘಾತ ತಂದಿದೆ. ಇಂತಹ ನಾಯಕರು ನಮ್ಮನ್ನು ಅಗಲಿದ್ದು ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ ಸದಾ ಪಕ್ಷದ ಸಂಘಟನೆ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕರುಇವತ್ತು ನಮ್ಮನ್ನು ಅಗಲಿರುವುದು ನೋವು ತಂದಿದೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ ಕಾರ್ಯದರ್ಶಿ ರಾಜು , ಬುಡಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ಉಪಾಧ್ಯಕ್ಷ ರಾಜು ರೇವಣಕರ, ಬಸವರಾಜ ಅವರಾದಿ, ನಗರಸಭೆ ಸದಸ್ಯರು, ಸದಸ್ಯೆಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!