ಮಂಡ್ಯ : ಅಗ್ನಿಶಾಮಕ ಮತ್ತು ತುರ್ತು ಸೇವೆಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ. ದೊಡ್ಡಯ್ಯ ಅವರು ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಪಡೆದಿದ್ದಾರೆ.
ಮೂಲತಃ ಮಂಡ್ಯ ತಾಲೂಕಿನ ಹುಲಿವಾನ ಗ್ರಾಮದ ಕಾಶಿಹೆಗ್ಗಡೆ ಅವರ ಪುತ್ರ ಕೆ. ದೊಡ್ಡಯ್ಯ ಅವರು 1983ರಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಸೇರ್ಪಡೆಗೊಂಡರು. ನಂತರ ಮಂಡ್ಯ, ಯಶವಂತಪುರ, ಹೈಗ್ರೌಂಡ್ಸ್, ಚನ್ನಪಟ್ಟಣ, ಹರಪನಹಳ್ಳಿ ಅಗ್ನಿಶಾಮಕ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ಉತ್ತಮ ಹೆಸರು ಪಡೆದಿದ್ದಾರೆ.
ಕೆ. ದೊಡ್ಡಯ್ಯ ಅವರು ವಿವಿಧ ಠಾಣೆಗಳಲ್ಲಿ ಉತ್ತಮ ಕಾರ್ಯನಿರ್ವಹಿಸಿರುವುದಕ್ಕೆ 24 ಪ್ರಶಂಸನಾ ಪತ್ರಗಳು, ನಗದು ಬಹುಮಾನಗಳನ್ನು ಪಡೆದಿದ್ದು, 2007ರಲ್ಲಿ ಚನ್ನಪಟ್ಟಣ ಅಗ್ನಿಶಾಮಕ ಠಾಣೆಯಲ್ಲಿ ಉತ್ತಮ ಕೆಲಸ ಮಾಡಿರುವುದಕ್ಕೆ ಮುಖ್ಯಮಂತ್ರಿಗಳ ಪದಕ ಪಡೆದಿದ್ದಾರೆ.
ಇಲಾಖೆಯಲ್ಲಿ ಸುಧೀರ್ಘ ಮತ್ತು ಉತ್ತಮ ಸೇವೆ ಸಲ್ಲಿಸಿರುವ ಕಾರಣ 2020ನೇ ಸಾಲಿನ 74ನೇ ಸಾತಂತ್ರ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ರಪತಿಗಳ ಶ್ಲಾಘನೀಯ ಪದಕ ಪಡೆದಿದ್ದು, ಮುಂದಿನ ಸಮಾರಂಭದಲ್ಲಿ ಡಿ. ದೊಡ್ಡಯ್ಯ ಅವರು ರಾಷ್ಟ್ರಪತಿಗಳಿಂದ ಪದಕ ಸ್ವೀಕರಿಸಲಿದ್ದಾರೆ.
ರಾಷ್ಟ್ರಪತಿಗಳ ಶ್ಲಾಘನೀಯ ಪ್ರಶಸ್ತಿ ಪದಕ ಪಡೆದಿರುವ ಕೆ.ದೊಡ್ಡಯ್ಯ ಅವರನ್ನು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪೆÇಲೀಸ್ ಮಹಾನಿರ್ದೇಶಕ ಎ.ಎಂ. ಪ್ರಸಾದ್ ಅವರು ಅಭಿನಂದಿಸಿದರು.