Thursday, August 18, 2022

Latest Posts

ಅಜಾಗರೂಕತೆ, ರ‍್ಯಾಶ್ ಡ್ರೈವಿಂಗ್ ನಿಂದ ಬೈಕ್‌ ಅಪಘಾತ: ಟಾಲಿವುಡ್‌ ನಟ ಸಾಯಿ ಧರಂತೇಜ್ ವಿರುದ್ಧ ಕೇಸ್ ದಾಖಲು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಟಾಲಿವುಡ್‌ ನಟ ಸಾಯಿ ಧರಂ ತೇಜ್ ಬೈಕ್‌ ಅಪಘಾತಕ್ಕೆ ಅಜಾಗರೂಕತೆ ಹಾಗೂ ರ‍್ಯಾಶ್ ಡ್ರೈವಿಂಗ್ ಕಾರಣವಾಗಿದ್ದು,ಎಂದು ರಾಯ್‌ದುರ್ಗಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಐಪಿಸಿಸಿ ಸೆಕ್ಷನ್‌ 336, 184 ಎಂಪಿ ಕಾಯ್ದೆಯಡಿ ಕೇಸ್‌ ದಾಖಲಿಸಿದ್ದಾರೆ.
ನಿನ್ನೆ ರಾತ್ರಿ 8.05ರ ಬೈಕ್‌ ಅಪಘಾತವಾಗಿದೆ. ಸಿಸಿ ಕ್ಯಾಮರಾದಲ್ಲಿ ಅಪಘಾತದ ದೃಶ್ಯಗಳು ದಾಖಲಾಗಿವೆ ಎಂದು ಮಾಹಿತಿ ನೀಡಿರುವ ಪೊಲೀಸರು, ಸಾಯಿ ಅವರ ಸ್ಪೋರ್ಟ್ಸ್‌ ಬೈಕ್‌ ಅನ್ನು ಸೀಜ್‌ ಮಾಡಿ ರಾಯ್‌ದುರ್ಗಂ ಪೊಲೀಸ್‌ ಠಾಣೆಗೆ ತಂದಿದ್ದಾರೆ.
ದುರ್ಗಂ ಚೇರವು ಕೇಬಲ್‌ ಬ್ರಿಡ್ಜ್‌ ಮೇಲೆ ನಿನ್ನೆ ರಾತ್ರಿ ಸಾಯಿ ಧರಂ ತೇಜ್‌ ಅವರ ಸ್ಪೋರ್ಟ್ಸ್‌ ಬೈಕ್‌ ಅಪಘಾತವಾಗಿತ್ತು. ದುರಂತದಲ್ಲಿ ತೇಜ್‌ ಗಂಭೀರವಾಗಿ ಗಾಯಗೊಂಡು ಪ್ರಜ್ಞೆ ಕಳೆದುಕೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!