Saturday, July 2, 2022

Latest Posts

ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ: ಮೈಸೂರು ಬಿಜೆಪಿಯಿಂದ ಬೀದಿ ಬದಿ ವ್ಯಾಪಾರಿಗಳಿಗೆ ಸ್ವೆಟರ್ ವಿತರಣೆ

ಹೊಸದಿಗಂತ ವರದಿ,ಮೈಸೂರು:

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಬಿಜೆಪಿಯ ಮೈಸೂರು ನಗರ ಘಟಕದ ವ್ಯಾಪಾರಿಗಳ ಪ್ರಕೋಷ್ಠ ವತಿಯಿಂದ ಸುಮಾರು 100 ಮಂದಿ ರಸ್ತೆ ಬದಿ ವ್ಯಾಪಾರಿಗಳಿಗೆ ಸ್ವೆಟರ್‌ನ್ನು ಉಚಿತವಾಗಿ ವಿತರಿಸಲಾಯಿತು.

ನಗರದ ಚಿಕ್ಕಗಡಿಯಾರದ ಬಳಿ ನಡೆದ ಕಾರ್ಯಕ್ರಮದಲ್ಲಿರಸ್ತೆ ಬದಿ ವ್ಯಾಪಾರಿಗಳಿಗೆ ಸ್ವೆಟರ್ ವಿತರಿಸಿದ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಅಜಾತಶತ್ರುವಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು, ಪ್ರಧಾನಿಯಾಗಿ ಭಾರತ ದೇಶದ ಪ್ರಗತಿಗೆ, ಅಭಿವೃದ್ಧಿಗೆ ಸೇವೆ ಸಲ್ಲಿಸಿದ್ದಾರೆ. ಟೆಲಿಕಾಂ ಕ್ಷೇತ್ರದಲ್ಲಿ ಕಾಂತ್ರಿಯನ್ನು ಮಾಡಿದರು. ಸಾಮಾನ್ಯ ಜನರಿಗೂ ಸಂಪರ್ಕ ಸಾಧನವನ್ನು ಕಲ್ಪಿಸಿದರು. ಗ್ರಾಮಗಳ ಅಭಿವೃದ್ಧಿಯನ್ನು ಮಾಡಿದರು. 65 ಸಾವಿರ ಕೋಟಿ ರೂ. ಅನ್ನು ಗ್ರಾಮ ಸಡಕ್ ಯೋಜನೆಗೆ ನೀಡಿದರು. ಭಾರತದ ಭವಿಷ್ಯದ ದಿಕ್ಕನ್ನು ಬದಲಿಸಿದ ಮಹಾನ್ ವ್ಯಕ್ತಿ ವಾಜಪೇಯಿ ಅವರು ಎಂದು ಸ್ಮರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಪ್ರಧಾನ ಕಾರ್ಯದರ್ಶಿ ವಾರ್ನಿಶಾ, ಚಾಮರಾಜ ಕ್ಷೇತ್ರದ ಅಧ್ಯಕ್ಷ ಸೋಮಶೇಖರ್ ರಾಜು, ನಗರಪಾಲಿಕೆ ಸದಸ್ಯ ವೇದವತಿ, ಬಿಜೆಪಿ ವ್ಯಾಪಾರಿ ಪ್ರಕೋಷ್ಠ ಸಂಚಾಲಕ ಆರ್.ಪರಮೇಶ್ ಗೌಡ, ಸಹ ಸಂಚಾಲಕ ಆರ್.ಸೋಮಶೇಖರ್, ಮೈ.ವಿ.ರವಿಶಂಕರ್, ಪುನೀತ್, ಶರವಣ ,ಲೋಹಿತ್, ಅನಂತರಾಮು, ನಾಗರಾಜು, ಕಿರಣ್ ಇತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss