Saturday, July 2, 2022

Latest Posts

ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದಂಗವಾಗಿ ಕಿಸಾನ್ ಸಮ್ಮಾನ್ ದಿನಾಚರಣೆ

ಹೊಸ ದಿಗಂತ ವರದಿ, ತುಮಕೂರು:

ಮಾಜಿ ಪ್ರಧಾನ ಮಂತ್ರಿ ಅಜಾತ ಶತ್ರುಗಳು ಅಟಲ್ ಬಿಹಾರಿ  ವಾಜಪೇಯಿ ಅವರ ಜನ್ಮದಿನವಾದ ಡಿಸೆಂಬರ್ 25ನ್ನು ಕಿಸಾನ್ ಸಮ್ಮಾನ್ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದರು.
ತುಮಕೂರಿನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಅಂದು ಅಪರಾಹ್ನ 12 ಪ್ರಧಾನ ಮಂತ್ರಿ ನರೇಂದ್ರ ಮೋದಿ
ಅವರು ವರ್ಚುವಲ್ ಸಮಾರಂಭದಲ್ಲಿ ರಾಷ್ಟ್ರದ ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹಾಗೂ ರಾಷ್ಟ್ರದ 9 ಕೋಟಿ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ಸ ಸಮ್ಮಾನ್ ನಿಧಿಯೋಜನೆಯಡಿ 18ಸಾವಿರ ಕೋಟಿ ರೂಗಳನ್ನು ರೈತರ ಖಾತೆಗಳಿಗೆ ಜಮೆ ಮಾಡಲಿದ್ದಾರೆ ಎಂದರು.
ಈ ಕಾರ್ಯಕ್ರಮ ರಾಜ್ಯ ಎಲ್ಲಾ’ ವಿಧಾನಸಭಾ ಮತ್ತು ಗ್ರಾಮಪಂಚಾಯಿತಿಯನ್ನು ಹಂತದಲ್ಲಿ ನಡೆಯಲಿವೆ ಎಂದರು.
ಎಲ್ಲೆಡೆ ವೇದಿಕೆ ಕಾರ್ಯಕ್ರಮಗಳು ನಡೆಯಲಿದ್ದು ಬೆಳಿಗ್ಗೆ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿವನ್ನು ಆಚರಿಸಲಾಗುತ್ತದೆ. ವೇದಿಕೆಯ ಲ್ಲಿ ದೊಡ್ಡ ಎಲ್. ಇ.ಡಿ.ಪರದಯನ್ನು ಅಳವಡಿಸಲಿದ್ದು ಪ್ರಧಾನ ಮಂತ್ರಿ ರೈತರನ್ನು ಉದ್ದೇಶಿಸಿ ಮಾತನಾಡುವುದನ್ನು ಎಲ್ಲರೂ ವೀಕ್ಷಿಸಬಹುದು ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈತರ ಅಬಿವೃದ್ದಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಯವರು ರೈತರ ಉನ್ನತಿಗಾಗಿ ಜಾರಿಗೆ ತಂದಿರುವ ಮೂರು ಪ್ರಮುಖ ತಿದ್ದುಪಡಿ ರೈತಪರವಾದ ಮೂರು ಕಾಯ್ದೆಗಳನ್ನು ರೈತರಿಗೆ ಪರಿಚಯಿಸುವ ಕೆಲಸ ಮಾಡಲಾಗುತ್ತದೆ ಎಂದರು. ರಾಜ್ಯ ರೈತಮೋರ್ಚಾ ಈಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸುರೇಶ್ ಗೌಡ. ಪ್ರಧಾನ ಕಾರ್ಯದರ್ಶಿ ಹೆಬ್ಬಾಕ ರವಿಕುಮಾರ್. ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್. ಶಿವಪ್ರಸಾದ್ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss