ಹೊಸದಿಲ್ಲಿ: ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ವಿಶ್ವದ ಅತಿ ಉದ್ದದ ಅಟಲ್ ಸುರಂಗದಲ್ಲಿ ಸಂಚಾರ ಮಾಡುವಾಗ ವಾಹನ ಚಾಲಕರ ಅಜಾಗರೂಕ ಚಾಲನೆಯಿಂದ ಉದ್ಘಾಟನೆಯಾದ 72 ಗಂಟೆಗಳಲ್ಲಿ 3 ಅಪಘಾತ ಸಂಭವಿಸಿದೆ.
ವಾಹನ ಸವಾರರ ಅತೀ ವೇಗದ ಚಾಲನೆಯಿಂದ ಈ ಅಪಘಾತಗಳು ಸಂಭವಿಸುತ್ತಿದ್ದು, ಮೋಟರಿಸ್ಟ್ ಗಳು ವೇಗವಾಗಿ ಚಲಿಸಿ ರೇಸಿಂಗ್ ಮಾಡುವ ಮೂಲಕ ಅಪಘಾತವಾಗುತ್ತಿರುವುದು ಅಧಿಕಾರಿಗಳಲ್ಲಿ ಆತಂಕ ಹೆಚ್ಚಿಸಿದೆ.
48 ಗಂಟೆಗಳ ನಂತರ ಸರ್ಕಾರ ಪೊಲೀಸರನ್ನು ನಿಯೋಜಿಸಿದ್ದು, ಬಿಆರ್ಒ ಮುಖ್ಯ ಎಂಜಿನಿಯರ್ ಕೆ.ಪಿ. ಸಂಚಾರ ನಿಯಂತ್ರಿಸಲು ಪಡೆಗಳನ್ನು ಒದಗಿಸಲು ಸ್ಥಳೀಯ ಆಡಳಿತಕ್ಕೆ ಮನವಿ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ಟೋಬರ್ 4 ರಂದು ಒಂದೇ ದಿನದಲ್ಲಿ ಮೂರು ಅಪಘಾತಗಳು ವರದಿಯಾಗಿದ್ದು, ಅಪಘಾತಗಳಿಗೆ ಹೆಚ್ಚಾಗಿ ಅಜಾಗರೂಕತೆಯ ಚಾಲನೆಯೇ ಕಾರಣವಾಗಿದೆ ಎಂದರು. ಸೆಲ್ಫಿ ತೆಗೆದುಕೊಳ್ಳಲು ಸುರಂಗದ ಮಧ್ಯೆ ನಿಲ್ಲಸಿರುವುದು ಸಿಸಿಟಿವಿ ದಾಖಲೆಗಳು ತಿಳಿಸಿವೆ.
ನಿರ್ವಹಣೆಗಾಗಿ ಸುರಂಗವನ್ನು ಪ್ರತಿದಿನ ಎರಡು ಗಂಟೆಗಳ ಕಾಲ ಮುಚ್ಚಲು ತೀರ್ಮಾನಿಸಿದ್ದು, ಬೆಳಿಗ್ಗೆ 9 ರಿಂದ ಬೆಳಿಗ್ಗೆ 10 ರವರೆಗೆ ಮತ್ತು ಸಂಜೆ 4 ರಿಂದ ಸಂಜೆ 5ರವರೆಗೆ ಮುಚ್ಚಲಾಗುತ್ತದೆ ಎಂದು ವರದಿ ತಿಳಿಸಿದೆ.